ಬಾಲ್ಯ ಸ್ನೇಹಿತನಿಂದಲೇ ಅಪಹರಣ !

Kannada News

20-06-2017

ಮೈಸೂರು: ಖಾಸಗಿ ಸಂಸ್ಥೆಯ ಮಹಿಳಾ ಉದ್ಯೋಗಿ ಅಪಹರಣ ಪ್ರಕರಣವನ್ನು ಕೇವಲ ಎಂಟು ಗಂಟೆಯಲ್ಲಿ ಮೈಸೂರಿನ ಪೊಲೀಸರು ಬೇಧಿಸಿದ್ದಾರೆ. ತಮಿಳುನಾಡು ಮೂಲದ ನೇತ್ರಾವತಿ (23)  ಎಂಬ ಯುವತಿ ಅಪಹರಣಕ್ಕೊಳಗಾಗಿದ್ದರು. ಈ ಕೃತ್ಯವನ್ನು ನೇತ್ರಾವತಿ ಬಾಲ್ಯದ ಸ್ನೇಹಿತ ನವೀನ್ ನಿಂದಲೇ ನಡೆದಿರುವುದನ್ನು ಪತ್ತೆ ಮಾಡಿದ್ದಾರೆ. ನಿನ್ನೆ ಬೆಳಿಗ್ಗೆ ನೇತ್ರಾವತಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕೃತ್ಯವನ್ನು ಗಮನಿಸಿದ ನೇತ್ರಾವತಿಯ ಸಹೋದ್ಯೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳು ಠಾಣೆ ಪೊಲೀಸರು ಕಳೆದ ರಾತ್ರಿ ಬೆಂಗಳೂರಿನಲ್ಲಿ ನವೀನ್ ನನ್ನು ವಶಕ್ಕೆ ಪಡೆದು, ಯುವತಿಯನ್ನು ರಕ್ಷಿಸಿದ್ದಾರೆ. ಈ ಬಗ್ಗೆ ನವೀನ್ ನನ್ನು ವಿಚಾರಣೆಗೆ ಒಳಪಡಿಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ನೇತ್ರಾವತಿ ತಮಿಳುನಾಡಿನ ಹೊಸೂರಿನವರಾಗಿದ್ದು. ಅಪಹಣ ಮಾಡಿರುವ ನವೀನ್ ನೇತ್ರಾವತಿಯ ಮಾಜಿ ಪ್ರಿಯಕರ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಜಾಂಶಗಳು ತನಿಖೆ ನಂತರವಷ್ಟೇ ಗೊತ್ತಾಗಲಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ