ಮಾಮ್‍ ಗೆ ಒಂದು ಸಾವಿರ ಭೂದಿನ !

Kannada News

19-06-2017

ಬೆಂಗಳೂರು: ಭಾರತದ ಮೊಟ್ಟಮೊದಲ ಅಂತರಗ್ರಹ ಮಿಷನ್, ಇಸ್ರೋದ ಮಂಗಳಯಾನ ಇಂದಿಗೆ ಒಂದು ಸಾವಿರ ಭೂದಿನಗಳನ್ನು ಪೂರ್ಣಗೊಳಿಸಿದೆ. ಇಸ್ರೋ 2013ರ ನವಂಬರ್ 5ರಂದು ತನ್ನ ಪಿಎಸ್‍ಎಲ್‍ವಿ ವಾಹಕದ ಮೂಲಕ ಮಾರ್ಸ್ ಆರ್ಬಿಟರ್ ಮಿಷನ್- ಮಾಮ್‍ ಅನ್ನು ಹಾರಿಬಿಟ್ಟಿತ್ತು. ಹಾಗೂ ಇದು ಮಾರನೇ ವರ್ಷ ಸೆಪ್ಟೆಂಬರ್ 24ರಂದು ತನ್ನ ಮೊದಲ ಯತ್ನದಲ್ಲೇ ಮಂಗಳನ ಕಕ್ಷೆ ಸೇರಲ್ಪಟ್ಟಿತು. ಅದೀಗ ತನ್ನ ಆರು ತಿಂಗಳ ಜೀವಿತಾವಧಿಯನ್ನು ಮೀರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ತಿಳಿಸಿದೆ. ಇದರಲ್ಲಿನ ವರ್ಣಚಿತ್ರ ಕ್ಯಾಮರಾ ಈವರೆಗೆ 715ಕ್ಕೂ ಹೆಚ್ಚು ಚಿತ್ರಗಳನ್ನು ರವಾನಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ