ರಾಮ್ ನಾಥ್ ಕೋವಿಂದ್ ಗೆ ಯಡಿಯೂರಪ್ಪ ಸ್ವಾಗತ !

Kannada News

19-06-2017

ಬೆಂಗಳೂರು: ಬಿಹಾರ ರಾಜ್ಯದ ರಾಜ್ಯಪಾಲ ರಾಮ್ ನಾಥ್  ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಘೋಷಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಿನಂದಿಸಿದ್ದಾರೆ. ಬಡ ರೈತನ ಮಗನಾಗಿರುವ ರಾಮ್ ನಾಥ್  ಕೋವಿಂದ್ ಅವರು, ಸಾರ್ವಜನಿಕ ಸೇವೆಯಲ್ಲಿ ಮತ್ತು ದೀನ-ದಲಿತರು, ಹಿಂದುಳಿದವರು ಮೊದಲಾದ ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದು, ನಿರ್ಲಕ್ಷಿತ ವರ್ಗಗಳ ದನಿಯಾಗಿ ಗುರುತಿಸಲ್ಪಡುವಂಥವರು. ತಮ್ಮ ಸುದೀರ್ಘ ರಾಜಕೀಯ ಅನುಭವ ಮತ್ತು ನ್ಯಾಯಾಂಗದ ಪರಿಣಿತಿಗಳಿಂದ ರಾಮ್ ನಾಥ ಕೋವಿಂದ್ ಅವರು, ಭಾರತ ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದಾರೆ. ಎಲ್ಲ ರಾಷ್ಟ್ರೀಯ ಪಕ್ಷಗಳೂ ಕೂಡ ಅವರ ಉಮೇದುವಾರಿಕೆಯನ್ನು ಬೆಂಬಲಿಸುವ ಮೂಲಕ, ರಾಮ್ ನಾಥ್ ಕೋವಿಂದ್ ಅವರು ಸರ್ವಾನುಮತದಿಂದ ಆಯ್ಕೆಯಾಗಲಿ ಎಂದು ನಾನು ಆಶಿಸುತ್ತೇನೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ