ರಾಷ್ಟ್ರಧ್ವಜಕ್ಕೆ ಅಪಮಾನ !

19-06-2017
ಮಂಡ್ಯ: ರಾಷ್ಟ್ರದ್ವಜ ಎಂಬುದು ದೇಶದ ಸಂಕೇತ, ಇದು ಎಲ್ಲರಲ್ಲೂ ದೇಶಾಭಿಮಾನ ಬಿತ್ತುತ್ತದೆ. ಅದನ್ನು ನಿರ್ವಹಿಸಲು ಕೆಲವು ನಿಯಮಗಳಿವೆ. ಅವುಗಳನ್ನು ಪಾಲಿಸಲೇಬೆಕು ಇಲ್ಲದಿದ್ದರೆ ಅದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಶಿಕ್ಷೆಯೂ ಇದೆ ಆದರೆ ಇಷ್ಟೆಲ್ಲಾ ಕಾನೂನುಗಳು ಇರುವಾಗ, ಮಂಡ್ಯದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆನ್ನಾಳು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದೆ. ಪಾಂಡವಪುರ ರೈಲ್ವೆ ನಿಲ್ದಾಣದ ಸಮೀಪದಲ್ಲಿ ರಾಷ್ಟ್ರಧ್ವಜ ಹರಿದರೂ ಕೂಡ ಅದನ್ನೇ ಬಳಕೆ ಮಾಡುತ್ತಿದ್ದು. ಈ ಬಗ್ಗೆ ಪಿ.ಡಿ.ಓ, ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಇನ್ನಾದರೂ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ