ಯುವತಿಗೆ ಮತ್ತಿಕ್ಕಿ ಪರಾರಿ !

Kannada News

19-06-2017

ಬೆಂಗಳೂರು: ಜೀವನಭೀಮಾ ನಗರದ ಬಸ್ ನಿಲ್ದಾಣದ ಬಳಿ ನಿಂತಿದ್ದ ಯುವತಿಯೊಬ್ಬರಿಗೆ  ಏಕಾಏಕಿ ಕಾಮುಕನೊಬ್ಬ ಮುತ್ತಿಕ್ಕಿ ಪರಾರಿಯಾಗಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಯುವತಿಯು ಜೀವನಭೀಮಾ ನಗರದ ಬಸ್ ನಿಲ್ದಾಣದ ಬಳಿ ಕಳೆದ ಜೂ.17 ಶನಿವಾರ ಮಧ್ಯರಾತ್ರಿ 2.30ರ ವೇಳೆ  ರಸ್ತೆ ಬದಿ ನಿಂತು ಕ್ಯಾಬ್‍ಗಾಗಿ ಕಾಯುತ್ತಿದ್ದಾಗ ಸ್ಥಳಕ್ಕೆ ಬಂದ ಕಾಮುಕ ಏಕಾಎಕಿ ಆಕೆಯ ಕೆನ್ನಗೆ ಮುತ್ತಿಕ್ಕಿ ಪರಾರಿಯಾಗಿದ್ದಾನೆ. ಯುವತಿಯು ಸ್ನೇಹಿತರ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಯುವತಿ  ನೀಡಿರುವ ದೂರು ದಾಖಲಿಸಿರುವ ಜೀವನಭೀಮಾನಗರ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಕಾಮುಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ