ಲಾರಿ ಡಿಕ್ಕಿ- ಅಜ್ಜನ ಸಾವು ಬದುಕುಳಿದ ಮೊಮ್ಮಗ !

Kannada News

19-06-2017

ಬೆಂಗಳೂರು: ಕುಮಾರಸ್ವಾಮಿ ಲೇಔಟ್‍ ನ ಇಟ್ಟಮಡು ರಸ್ತೆಯಲ್ಲಿ ಭಾನುವಾರ ರಾತ್ರಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಅಜ್ಜ ಸಾವನ್ನಪ್ಪಿದರೆ, ಮೊಮ್ಮಗ ಗಾಯಗೊಂಡು ಪಾರಾರಿಯಾಗಿರುವ ಘಟನೆ ನಡೆದಿದೆ. ಮೃತರನ್ನು ಕೋಣನಕುಂಟೆಯ ಚಿಕ್ಕನಗೌಡ(65)ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ  ಮೊಮ್ಮಗ ಮನು(22)ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಮಾರಸ್ವಾಮಿ ಲೇಔಟ್‍ ನಲ್ಲಿರುವ ಚಿಕ್ಕನಗೌಡ ಕೆಲಸ ಮುಗಿಸಿಕೊಂಡು ಉತ್ತರಹಳ್ಳಿಯ ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ರಾತ್ರಿ 8.30ರ ವೇಳೆ ಮೊಮ್ಮಗನ ಬೈಕ್‍ನಲ್ಲಿ ಹಿಂದೆ ಕುಳಿತುಕೊಂಡು ಚಿಕ್ಕನಗೌಡ ಹೋಗುತ್ತಿದ್ದರು. ಮಾರ್ಗಮಧ್ಯೆ  ಇಟ್ಟಮಡು ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಲಾರಿಯಡಿ ಸಿಕ್ಕ ಚಿಕ್ಕನಗೌಡ ಸ್ಥಳದಲ್ಲೇ ಮೃತಪಟ್ಟರೆ ಪಕ್ಕಕ್ಕೆ ಬಿದ್ದ ಮನು ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿರುವ  ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಲಾರಿ ಚಾಲಕ ತಮಿಳುನಾಡಿನ ಮೊಹಮ್ಮದ್ ರಷೀದ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿ.ಸಿ.ಪಿ ಶೋಭಾರಾಣಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ