ತೆಲಂಗಾಣದಲ್ಲಿ ಮುಸ್ಲೀಮರಿಗೆ ಶೇ 12 ಮೀಸಲಾತಿ ..?

Kannada News

19-06-2017

ಹೈದರಾಬಾದ್: ಮೀಸಲಾತಿ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚರ್ಚೆ ಮತ್ತು ವಿವಾದಗಳನ್ನು ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟ ಮತ್ತು ಪಂಗಡದವರ ಮೀಸಲಾತಿ ಹೆಚ್ಚಿಸುವ ಕುರಿತು ಕೆಲ ದಿನಗಳ ಹಿಂದೆ ಮಾತನಾಡಿದ್ದರು, ಇದರ ಬೆನ್ನಲ್ಲೇ  ತೆಲಂಗಾಣದ ಮುಖ್ಯಂತ್ರಿ  ಮುಸ್ಲೀಮರಿಗೆ ತೆಲಂಗಾಣದಲ್ಲಿ ಶೇ 4 ರಿಂದ  ಶೇ 12 ರಷ್ಟು ಮೀಸಲಾತಿ  ಹೆಚ್ಚಿಸುವ ಪ್ರಸ್ತಾಪವನ್ನು ತೆಲಂಗಾಣ ವಿಧಾನ ಸಭೆಯಲ್ಲಿ ಮಂಡಿಸಿದ್ದೂ ಅದನ್ನೂ ಸದನ ಒಪ್ಪಿದ್ದೂ ಆಗಿದೆ. ಇದೀಗ  ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿದ್ದು, ಕೇಂದ್ರದ ನಿರ್ಧಾರವಷ್ಟೇ ಬಾಕಿ ಇದೆ. ತೆಲಂಗಾಣದ ಈ  ಮಸೂದೆಯನ್ನು ಕೇಂದ್ರ ಸರ್ಕಾರ ಒಪ್ಪದಿರುವ ಬಗ್ಗೆ ಕೇಳಿಬರುತ್ತಿದ್ದು, ಮೂಲಗಳ ಪ್ರಕಾರ ಇದನ್ನು ತಿರಸ್ಕರಿಸುವ ಸೂಚನೆಗಳು ಬಲವಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತು ಮಾತನಾಡಿದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್. ನಾನು ಪ್ರಧಾನಿಯವರನ್ನು ಭೇಟಿ ಮಾಡಿದ್ದ ಸಂಧರ್ಭದಲ್ಲಿ ಈ ಕುರಿತು ವಿವರಿಸಿದ್ದೇನೆ, ಮುಸ್ಲೀಮರಿಗೆ 12 ರಷ್ಟು ಮೀಸಲಾತಿ ತೆಲಂಗಾಣ ಚುನಾವಣೆಯ ಭರವಸೆಯಾಗಿದ್ದು ಇದನ್ನು ಪೂರೈಸಲು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ. ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡುವ ಭರವಸೆಯಲ್ಲಿದ್ದೇವೆ ಎಂದರು ಮತ್ತು, ಈ ಕುರಿತು ದೆಹಲಿಗೆ ತೆರಳಿದ್ದೇವೆ ಎಂದು ತಿಳಿಸಿದರು,  ಕೆಂದ್ರ ಸರ್ಕಾರ  ಈ ವಿಷಯದ ಕುರಿತು ಸರಿಯಾದ ನಿರ್ಣಯ ಕೈಗೊಳ್ಳದಿದ್ದಲ್ಲಿ ನಾವು ಸುಮ್ಮನೆ ಕೂರುವುದಿಲ್ಲ ಎಂದಿದ್ದಾರೆ. ಈ ಮೀಸಲಾತಿ ನಮ್ಮ ಹಕ್ಕು ಎಂದ ಅವರು ಇದನ್ನು ತೆಲಂಗಾಣ ಶಾಸಕಾಂಗದಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದೇವೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ