ಲಂಡನ್ ನ ಮಸೀದಿ ಬಳಿ ಯಮದೂತನಂತೆ ಬಂದ ವ್ಯಾನ್ !

Kannada News

19-06-2017

ಲಂಡನ್: ಉತ್ತರ ಲಂಡನ್ ನ ಫಿನ್ಸ್ ಬರಿ ಪಾರ್ಕ್ ಬಳಿ ಇರುವ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಹೊರ ಬರುತ್ತಿದ್ದ ವೇಳೆ, ಗುಂಪಿನ ಮೇಲೆ ವೇಗವಾಗಿ ಬರುತ್ತಿದ್ದ ವ್ಯಾನ್ ಒಂದು ಯಮದೂತನಂತೆ ಎರಗಿದೆ. ಘಟನೆಯಲ್ಲಿ ಒಬ್ಬರು ಮೃತ ಪಟ್ಟಿದ್ದು, ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತು ಘಟನೆಯ ಕುರಿತು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯು ಉಗ್ರರ ಕೃತ್ಯ ವಿರಬಹುದೆಂದು ಶಂಕಿಸಲಾಗಿದ್ದು, ಲಂಡನ್ ಪ್ರಧಾನಿಗಳಾದ  ಥೆರೆಸಾ ಮೇ ಖಂಡಿಸಿದ್ದಾರೆ. ಈ ಕುರಿತು ತುರ್ತು ಸಭೆ ಕರೆಯಲಾಗುವುದೆಂದು ಹೇಳಿದ್ದಾರೆ. ಆದರೆ ಲಂಡನ್ ನ ಮುಸ್ಲಿಂ ಕೌಂಸಿಲ್ ಆಫ್ ಬ್ರಿಟನ್ ಘಟನೆ ಕುರಿತು ಇದೊಂದು, ಉದ್ದೇಶಪೂರ್ವಕವಾಗಿ ನಡೆಸಿರುವಂತಹ ಬಿಳಿಯರ  ಕೃತ್ಯ ಎಂದು ಜನಾಂಗೀಯ ನಿಂದನೆ ಮಾಡಿದ್ದಾರೆ. ಘಟನೆ ನಡೆದಿರುವ ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿ ಲಂಡನ್ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ