ಲಾಲೂ ಪ್ರಸಾದ್ ಯಾದವ್ ಪುತ್ರನ ಪೆಟ್ರೋಲ್ ಬಂಕ್ ರದ್ದು !

Kannada News

17-06-2017

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರದ ಆರೋಗ್ಯ ಇಲಾಖೆ ಸಚಿವ ತೇಜ್ ಪ್ರತಾಪ್ ಯಾದವ್ ಗೆ ಹಿನ್ನಡೆಯಾಗಿದ್ದು, ಅವರ ಹೆಸರಲ್ಲಿದ್ದ ಪೆಟ್ರೋಲ್ ಬಂಕ್ ಅನ್ನು ರದ್ದು ಮಾಡಲಾಗಿದೆ. ಪಾಟ್ನಾದ ಅನಾಸಾಬಾದ್ ಬೈಪಾಸ್ ನಲ್ಲಿ ತೇಜ್ ಪ್ರತಾಪ್ ಪೆಟ್ರೋಲ್ ಬಂಕ್ ಹೊಂದಿದ್ದು, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಯ ಡೀಲರ್ ಆಗಿದ್ದರು. ಆದರೆ, ಅವರು ನಕಲಿ ದಾಖಲೆ ನೀಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಗೆ ಸಮರ್ಪಕವಾದ ಉತ್ತರವನ್ನು ನೀಡುವಲ್ಲಿ ವಿಫಲವಾದ ಕಾರಣ ತೇಜ್ ಪ್ರತಾಪ್ ಅವರ ಪೆಟ್ರೋಲ್ ಬಂಕ್ ಅನ್ನು ರದ್ದು ಮಾಡಲಾಗಿದೆ. ಭಾರತ್ ಪೆಟ್ರೋಲಿಯಂ ಈ ಬಗೆಗೆ ಮಾಹಿತಿ ನೀಡಿದ್ದು, ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ತೇಜ್ ಪ್ರತಾಪ್ ಯಾದವ್ ಅವರ ಬಂಕ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ