ವಜಾಗೊಂಡಿದ್ದ ಪಿ.ಎಸ್.ಐ ಆತನ ದರೋಡೆ ಗ್ಯಾಂಗ್ ಬಂಧನ !  

Kannada News

17-06-2017 649

ಬೆಂಗಳೂರು: ತನ್ನ ಇಬ್ಬರು ಸಹೋದರರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ದರೋಡೆ, ಕಳ್ಳತನ ಇನ್ನಿತರ ಅಪರಾಧ ಕೃತ್ಯಗಳನ್ನು ನಡೆಸಿ ತಲೆಮರೆಸಿಕೊಂಡಿದ್ದ ರೌಡಿ ವಜಾಗೊಂಡ ಪಿ.ಎಸ್.ಐ (ಸಬ್‍ಇನ್ಸ್‍ಪೆಕ್ಟರ್)ಚಂದ್ರಶೇಖರ್ ಅಲಿಯಾಸ್ ಚಲ್ಲಘಟ್ಟ ಚಂದ್ರನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಯೆಮಲೂರಿನ ನಾಗಸಂದ್ರದ ಚಲ್ಲಘಟ್ಟ ಚಂದ್ರ(41)ನ ಜೊತೆ ಆತನ ಸಹೋದರರಾದ ಮಂಜುನಾಥ ಅಲಿಯಾಸ್ ಬಾಕ್ಸರ್ ಮಂಜ, ಅಶೋಕ್ ಕುಮಾರ್ ಅಲಿಯಾಸ್ ಅಶೋಕನನ್ನು ಬಂಧಿಸಲಾಗಿದೆ. ಈ ಮೂವರು ಜೀವನ ಭೀಮಾನಗರ ಪೊಲೀಸ್ ಠಾಣೆಯ ರೌಡಿಗಳಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ. ಕಳೆದ 1987ರಲ್ಲಿ ಎಎಸ್‍ಐ ಆಗಿ ಸೇರಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿ 2001ರಲ್ಲಿ ಸೇವೆಯಿಂದ ವಜಾಗೊಂಡಿದ್ದ ಚಲ್ಲಘಟ್ಟಚಂದ್ರ ತನ್ನ ತಮ್ಮಂದಿರಾದ ಬಾಕ್ಸರ್ ಮಂಜ, ಅಶೋಕನನ್ನು ಸೇರಿಸಿಕೊಂಡು ಗ್ಯಾಂಗ್ ಕಟ್ಟಿ ದರೋಡೆ, ಕಳ್ಳತನ ಇನ್ನಿತರ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಚಂದ್ರನ ವಿರುದ್ಧ ಹೆಚ್.ಎ.ಎಲ್‍ನಲ್ಲಿ ಕೊಲೆ ಯತ್ನ, ಚೆನ್ನಪಟ್ಟಣ ಗ್ರಾಮಾಂತರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಢಕಾಯಿತಿ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯವು ಪೊಲೀಸ್ ರೀಕ್ಲೊಮೇಷನ್ ಹೊರಡಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ