ಶ್ರೀನಗರ ಮತ್ತು ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳಿಂದ ಬಂದ್ !

Kannada News

17-06-2017

ಶ್ರೀನಗರ: ಶುಕ್ರವಾರ ಜಮ್ಮು ಕಾಶ್ಮೀರದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 12 ಮಂದಿ ಸಾವನ್ನಪ್ಪಿರುವುದನ್ನು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿರುವುದನ್ನು ವಿರೋಧಿಸಿ ಜಮ್ಮು ಕಾಶ್ಮೀರ  ಮತ್ತು ಶ್ರೀನಗರದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಜಮ್ಮು ಕಾಶ್ಮೀರದ ಪ್ರತ್ಯೇಕ ವಾದಿಗಳು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಶ್ರೀನಗರದಲ್ಲಿ ಸಂಪೂರ್ಣ ಬಂದ್  ಆಚರಿಸಲಾಗಿತ್ತು. ಇದರಿಂದ ಜಿಲ್ಲೆಯ ಮ್ಯಾಜಿಸ್ರ್ಟೇಟ್ ಆದ ಫಾರೂಕ್ ಅಹಮದ್ ಶ್ರೀನಗರದ ಪ್ರದೇಶಗಳಾದ ರೈನ್ವಾರಿ, ಖಾನ್ಯಾರ್, ನೌಹಟ್ಟಾ ಮತ್ತು ಎಂ.ಆರ್ ಗುಂಜ್ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧ ಹೇರಿರುವುದಾಗಿ ತಿಳಿಸಿದ್ದಾರೆ. ಈ ಪ್ರದೇಶಗಳಿಗೆ ಕೇಂದ್ರ ಮೀಸಲು ಪಡೆ ಮತ್ತು  ಹೆಚ್ಚುವರಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ ಎಂದೂ ತಿಳಿಸಿದರು. ಅಲ್ಲದೇ ಅಹಿತಕರ ಘಟನೆಗಳೂ ನಡೆಯದ ಹಾಗೇ ಬಾರಮುಲ್ಲಾ ಮತ್ತು ಬನಿಹಾಲ್ ನಡುವೆ ರೈಲು ಸಂಚಾರವನ್ನೂ ನಿಷೇಧಿಸಿದೆ. ಅಲ್ಲದೇ ಇಂದು ನಡೆಯಬೇಕಿದ್ದ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಶಾಲೆಗಳೂ, ಅಂಗಡಿಮುಂಗಟ್ಟುಗಳು ಮುಚ್ಚಿದ್ದೂ ರಸ್ತೆಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಒಟ್ಟಾರೆ ಇಲ್ಲಿ ಆಗಾಗ ನಡೆಯುವ ಗುಂಡಿನ ದಾಳಿಗಳು ಇಲ್ಲಿನ ಜನರು ನೆಮ್ಮದಿಯ ಜೀವನನ್ನು ಕಸಿದುಕೊಂಡಿವೆ ಅಂತಲೇ ಹೇಳಬಹುದು. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ