ಭಾರತದ ರಹಸ್ಯ ಮಾಹಿತಿ ಕದಿಯಲು ಪಾಕಿಸ್ತಾನದಿಂದ ವಿಫಲ ಯತ್ನ !

Kannada News

17-06-2017

ಮುಂಬೈ: ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆ ಮತ್ತು ಭಾರತಕ್ಕೆ ಹಾನಿಯಾಗುವ ಅನೇಕ ವಿಚಾರಗಳನ್ನು ನಡೆಸುತ್ತಲೇ ಇದೇ. ಇದೀಗ ಅಕ್ರಮಗಾಗಿ ಭಾರತದ ಟಿಲಿಕಾಂ  ಕಂಪನಿಗಳಿಗೆ ಲಗ್ಗೆ ಇಟ್ಟು ಭಾರತದ ಮಿಲಿಟರಿಯ ಕುರಿತು ರಹಸ್ಯ ಮಾಹಿತಿಗಳನ್ನು ಕದಿಯಲು ಪ್ರಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಭಾರತದ ಟೆಲಿಕಾಂ ನೆಟ್ ವರ್ಕ್ ಒಳನುಸುಳಿ ಸೂಕ್ಷ್ಮ ಮಿಲಿಟರಿ ಮಾಹಿತಿಯನ್ನು ಸಂಗ್ರಹಿಸಲು ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್  ಆಧಾರಿತ ವಿನಿಮಯ ಕೇಂದ್ರಗಳನ್ನು ಬಳಸಿಕೊಳ್ಳುತ್ತಿರುವ ಮಾಹಿತಿ ಬಯಲಾಗಿದೆ. ಮಹಾರಷ್ಟ್ರದ  ಲಾಥೂತ್  ಜಿಲ್ಲೆಯಲ್ಲಿ ಈ ಪ್ರಕರಣವನ್ನು ಟಿಲಿಕಾಂ ಸಂಸ್ಥೆಯ ಅಧಿಕಾರಿಗಳೂ ಮತ್ತು ಎಟಿಎಸ್ (ಆಂಟಿ ಟೆರರಿಸಂ ಸ್ಕಾಡ್) ಪತ್ತೆ ಹಚ್ಚಿದೆ. ಕಳೆದ ಜನವರಿಯಿಂದ ಈ ವರೆಗೂ ಇಂತಹ ಕೃತ್ಯ ನಾಲ್ಕನೆ ಬಾರಿಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ, ಹೈದರಾಬಾದ್, ಭೋಪಾಲ್ ಗಳಲ್ಲಿ ಈ ಕೃತ್ಯ ಎಸಗಿತ್ತು. ಮಹಾರಾಷ್ಟ್ರದ ಲಾಥೂಲ್ ಜಿಲ್ಲೆಯಲ್ಲಿ ಭಯೋತ್ಪಾನಾ ವಿರೋಧಿ ತಂಡ ಮತ್ತು ಪೊಲೀಸರು  ಖಚಿತ ಮಾಹಿತಿ ಮೇರೆಗೆ ಜಿಲ್ಲೆಯ ಪ್ರಕಾಶನಗರದಲ್ಲಿ ದಾಳಿ ನಡೆಸಿದಾಗ ಈ ಕೃತ್ಯಗಳು ಬೆಳಕಿಗೆ ಬಂದಿವೆ, ದಾಳಿ ನಡೆಸಿದ ಸ್ಥಳದಲ್ಲಿ 96 ಸಿಮ್ ಕಾರ್ಡ್ ಗಳು, ಒಂದು ಕಂಪ್ಯೂಟರ್ ಮತ್ತು ಇತರ ಮಾಹಿತ ತಿಳಿದುಕೊಳ್ಳಲು ಕಾಲ್ಸ್ ಟ್ರಾನ್ಸಫಾರ್ಮಿಂಗ್ ಮಿಶಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ವಾಲಂದಿ ಜಿಲ್ಲೆಯಲ್ಲಿ ಸುಮಾರು 14 ಸಿಮ್ ಕಾರ್ಡ್ ಗಳು, ಮತ್ತು 1,20,000 ಬೆಲೆ ಬಾಳುವ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ