ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರ ಬಂಧನ !

Kannada News

16-06-2017

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ ಮೂವರು ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಂಗಸಂದ್ರದ ನ್ಯೂ ಮೈಕೊ ಲೇಔಟ್‍ನ ಮನೆಯೊಂದರ ಬಳಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ದೀಪು (25), ಶಿವರಾಂ (29), ರೂಪಲ್ (33), ಅವಿನಾಶ್ (26) ಎಂಬುವರನ್ನು ಬಂಧಿಸಿದ್ದಾರೆ. ದಂಧೆಯಲ್ಲಿ ತೊಡಗಿದ್ದ ಮೂವರು ಯುವತಿಯರನ್ನು ರಕ್ಷಿಸಿ 4 ಸಾವಿರ ನಗದು ವಶಪಡಿಸಿಕೊಂಡು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಕೋರಮಂಗಲದ ನಾರಾಯಣ ರೆಡ್ಡಿ ಲೇಔಟ್ ನಲ್ಲಿ ವಿಡಿಯೋ ಗೇಮ್ ಜೂಜಾಟ ನಡೆಸುತ್ತಿದ್ದ 18 ಮಂದಿಯನ್ನು ಬಂಧಿಸಿ 11,350 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಲವು ದಿನಗಳಿಂದ ಮೆಂಬರ್ಸ್ ಲಾಂಜ್ ಎಂಬ ಅಂಗಡಿಯಲ್ಲಿ ವಿಡಿಯೋ ಗೇಮ್ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ