ಗಾಂಜಾ ಮಾರುತ್ತಿದ್ದ ಮೂವರ ಬಂಧನ !

Kannada News

16-06-2017

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿ ಮೂವರನ್ನು ಉತ್ತರವಿಭಾಗದ ಪೊಲೀಸರು ಬಂಧಿಸಿ 2 ಲಕ್ಷ 20 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೋರಮಂಗಲದ  ಮೊಹಮ್ಮದ್ ಮುಸ್ತಫಾ ಶಾನ್ (19), ಸಯಸ್ ಆಲ್ ಅಮಿನ್ (24), ಸರ್ಜಾಪುರದ ಚಂದ್ರಪ್ಪ (45) ಬಂಧಿತ ಆರೋಪಿಗಳಾಗಿದ್ದಾರೆ. ಕೇರಳ ಮೂಲದ ಶಾನ್ ಹಾಗೂ ಅಮಿನ್ ನಿಂದ 6 ಕೆಜಿ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರು ಆರೋಪಿಗಳು ಬೇರೆಡೆಯಿಂದ ಗಾಂಜಾ ತಂದು ನಗರದ ವಿವಿಧೆಡೆ ಸಂಚರಿಸಿ ಮಾರಾಟ ಮಾಡುತ್ತಿದ್ದರು. ಹೆಸರಘಟ್ಟ ಮುಖ್ಯರಸ್ತೆಯ ಸಪ್ತಗಿರಿ ಕಾಲೇಜು ಬಳಿಯ ಮನೆಯೊಂದರ ನೆಲಮಹಡಿಯಲ್ಲಿ ಆರೋಪಿಗಳು ಗಾಂಜಾ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸೋಲದೇವನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ. ಇನ್ನೊಂದೆಡೆ ಆರ್‍.ಎಂ.ಸಿ ಯಾರ್ಡ್ ನ ಮಾರಪ್ಪನ ಪಾಳ್ಯದ ಅಂಗಡಿಯೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿದ ಆರ್‍.ಎಂ.ಸಿ ಯಾರ್ಡ್ ಪೊಲೀಸರು ಮತ್ತೊಬ್ಬ ಆರೋಪಿ ಚಂದ್ರಪ್ಪನನ್ನು ಬಂಧಿಸಿ 40 ಸಾವಿರ ಮೌಲ್ಯದ 1 ಕೆಜಿ 450 ಗ್ರಾಂ ತೂಕದ ಗಾಂಜಾ ಮತ್ತು ಹೋಂಡಾ ಆಕ್ಟಿವಾ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ