ಜುಲೈ1 ರಿಂದ  ಜಿ.ಎಸ್.ಟಿ ಜಾರಿ !

Kannada News

16-06-2017

ನವದೆಹಲಿ: ಕೇಂದ್ರದ ಜಿ.ಎಸ್.ಟಿ ಕಾಯಿದೆ ಜುಲೈ1 ರಿಂದ ಜಾರಿಗೊಳ್ಳಲಿದ್ದು, ಸರಕುಗಳು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವ್ಯವಸ್ಥೆಯಲ್ಲಿ ಯಾವ ಯಾವ ವಸ್ತುಗಳ ಮೇಲೆ ಕಡಿಮೆ ತೆರಿಗೆ ವಿಧಿಸಲಾಗಿದೆ ಎಂಬ ಬಗ್ಗೆ ನಾಗರಿಕರಲ್ಲಿ ಗೊಂದಲಗಳಿರುವುದು ಸಹಜ. ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಇಲಾಖೆ ಶೇ.81ರಷ್ಟು ವಸ್ತುಗಳಿಗೆ ಕಡಿಮೆ ತೆರಿಗೆ ವಿಧಿಸಲಾಗಿದೆ ಎಂಬ ಅಂಶವನ್ನು ದೇಶದ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಈ ಅನುಮಾನ ಬಗೆಹರಿಸಲು ಯತ್ನಿಸಿದೆ. ಜಿಎಸ್‍ಟಿ ವ್ಯವಸ್ಥೆಯು ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿದ್ದು, ಸಾಮೂಹಿಕವಾಗಿ ಬಳಸಲಾಗುತ್ತಿರುವ ಉತ್ಪನ್ನಗಳ ದರ ಕಡಿತಗೊಳಿಸುವ ಏಕಮಾತ್ರ ತೆರಿಗೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್‍ಟಿ ವಿನಾಯಿತ ಉತ್ಪನ್ನಗಳು : ಪ್ಯಾಕ್ ಮಾಡದಿರುವ ಧಾನ್ಯಗಳು, ಬೆಲ್ಲ, ಹಾಲು, ಮೊಟ್ಟೆಗಳು, ಮೊಸರು, ಲಸ್ಸಿ, ಪ್ಯಾಕ್ ಮಾಡದಿರುವ ಪನ್ನೀರ್, ಬ್ರಾಂಡ್ ರಹಿತ ನೈಸರ್ಗಿಕ ಜೇನು, ತಾಜಾ ತರಕಾರಿಗಳು, ಬ್ರಾಂಡ್ ಸಹಿತ ಹಿಟ್ಟು, ಮೈದಾ, ಪಾಮರಿ ಬೆಲ್ಲ, ಉಪ್ಪು, ಕಾಜಲ್, ಮಕ್ಕಳ ಡ್ರಾಯಿಂಗ್ ಮತ್ತು ಕಲರಿಂಗ್ ಪುಸ್ತಕಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು.

ಕೇವಲ ಶೇ.5ರಷ್ಟು ಜಿಎಸ್‍ಟಿ : ಸಕ್ಕರೆ, ಚಹಾ ಪುಡಿ, ಹುರಿದ ಕಾಫಿ ಬೀಜಗಳು, ಖಾದ್ಯ ತೈಲಗಳು, ಸ್ಕಿಮ್ಡ್ ಹಾಲಿನ ಪೌಡರ್, ಶಿಶುಗಳ ಹಾಲಿನ ಆಹಾರ, ಪ್ಯಾಕ್ ಮಾಡಲಾದ ಪನ್ನೀರ್, ಪಿಡಿಎಸ್ ಸೀಮೆಎಣ್ಣೆ, ಗೃಹೋಪಯೋಗಿ ಎಲ್‍ಪಿಜಿ, ಬಟ್ಟೆ, ಪಾದರಕ್ಷೆ, ಉಡುಪುಗಳು, ಗೋಡಂಬಿ, ದ್ರಾಕ್ಷಿ, ಅಗರಬತ್ತಿ, ಇದ್ದಿಲು, ಕಾಯಿರ್ ಮ್ಯಾಟ್, 

ಶೇ.12ರಷ್ಟು ಜಿಎಸ್‍ಟಿ : ಎಣ್ಣೆ, ತುಪ್ಪ, ಬಾದಾಮಿ, ಹಣ್ಣಿನ ರಸ, ಪ್ಯಾಕ್ ಮಾಡಲಾದ ತೆಂಗಿನ ನೀರು, ತರಕಾರಿ ಖಾದ್ಯಗಳು, ಹಣ್ಣುಗಳು, ಕಾಯಿಗಳು (ಉಪ್ಪಿನಕಾಯಿ, ಮುರಬ್ಬ, ಚಟ್ನಿ, ಜಾಮ್, ಜೆಲ್ಲಿ), ಛತ್ರಿ, ಮೊಬೈಲ್‍ಗಳು

ಶೇ.18ರಷ್ಟು ಜಿಎಸ್‍ಟಿ : ಕೇಶ ತೈಲ, ಟೂಥ್‍ ಪೇಸ್ಟ್, ಸೋಪು, ಪಾಸ್ತಾ, ಕಾರ್ನ್ ಫ್ಲೇಕ್ಸ್, ಸೂಪ್‍ ಗಳು, ಐಸ್‍ ಕ್ರೀಂ, ಶೌಚಾಲಯ ವಸ್ತುಗಳು, ಕಂಪ್ಯೂಟರ್ ಗಳು ಮತ್ತು ಪ್ರಿಂಟರ್‍ ಗಳು

ಶೇ 28ರಷ್ಟು ಜಿಎಸ್‍ಟಿ: ಕಾರುಗಳು, ಸಿಮೆಂಟ್, ಪರ್ಫ್ಯೂಮ್ಸ್, ಶಾಂಪೂ, ಫೈರ್ ವರ್ಕ್ಸ್, ಹೇರ್ ಕ್ರೀಮ್, ಹೇರ್ ಡ್ರೈಯರ್ ಇತ್ಯಾದಿ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ