ದರ್ಪ ತೋರಿದ ಶಾಸಕನಿಗೆ ವಿಮಾನ ಸಂಸ್ಥೆಗಳಿಂದ ನಿಷೇಧ !

Kannada News

16-06-2017

ಹೈದರಾಬಾದ್: ಮಹಾರಾಷ್ಟ್ರದಲ್ಲಿ ಶಾಸಕರೋಬ್ಬರು ವಿಮಾನ ನಿಲ್ದಾಣಲ್ಲಿ ಅನೂಚಿತ ವರ್ತನೆ ತೋರಿರುವ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು  ಸಂಸತ್ತಿನಲ್ಲೂ ಈ ಬಗ್ಗೆ ಚರ್ಚೆಗೆ ಬಂದಿತ್ತು, ಇದರಿಂದ ಅನೂಚಿತ ವರ್ತನೆ ತೋರಿದ ಶಾಸಕನಿಗೆ, ವಿಮಾನ ಪ್ರಯಾಣ ಸಂಸ್ಥೆಗಳು ನಿಷೇಧ ಹೇರಿತ್ತು, ಈ ಘಟನೆ ಮಾಸುವ ಮುನ್ನವೇ ಇದೇ ರೀತಿಯ ಘಟನೆಯೊಂದು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ಜರುಗಿದೆ. ಪ್ರಯಾಣದ ವೇಳೆ ತಮಗೆ ಬೋರ್ಡಿಂಗ್ ಪಾಸ್ ನೀಡಲಿಲ್ಲವೆಂಬ ಕಾರಣಕ್ಕೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ದಾಂಧಲೆ ನಡೆಸಿದ್ದ ಅನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತೆಲುಗುದೇಶಂ ಸಂಸದ ಜೆ.ಸಿ. ದಿವಾಕರ್ ರೆಡ್ಡಿಯವರ ಮೇಲೆ ಆರು ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿವೆ. ಇಂಡಿಗೋ ವಿಮಾನಯಾನ ಸಂಸ್ಥೆ, ದಿವಾಕರ್ ರೆಡ್ಡಿಯವರ ಪ್ರಯಾಣದ ಮೇಲೆ ಮೊದಲು ನಿಷೇಧವನ್ನು ಹೇರಿತ್ತು, ಈಗ ಇತರೆ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಗೋ ಏರ್, ವಿಸ್ತಾರಾ ಏರ್ಲೈನ್ಸ್, ಸ್ಪೈಸ್ ಜೆಟ್ ಹಾಗೂ ಜೆಟ್ ಏರ್ವೇಸ್ ಗಳು ನಿಷೇಧವನ್ನು ಹೇರಿವೆ. ಇತ್ತೀಚಿನ ದಿನಗಳಲ್ಲಿ ಶಾಸಕರ ದರ್ಪ ವಿವಿಧ ರೀತಿಗಳಲ್ಲಿ ಹೆಚ್ಚಾಗುತ್ತಿದ್ದು, ಇದರಿಂದ ಅವರು ಪ್ರತಿನಿಧಿಸುವ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದು, ಅವರ ನಿಜ ಬಣ್ಣಗಳು ಬಯಲಾಗುತ್ತಿವೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ