ಬಾಂಗ್ಲಾ ವಿರುದ್ಧ ಭಾರತದ ಗೆಲುವಿನ ಕ್ರೆಡಿಟ್‌ ಧೋನಿಗೆ ಸಲ್ಲಬೇಕು !

Kannada News

16-06-2017

ಧೋನಿ ತೋರಿದ ಚತುರತೆ ನಿರ್ಧಾರದಿಂದ ಬಾಂಗ್ಲಾ ವಿರುದ್ಧ ಸುಲಭ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಬಾಂಗ್ಲಾದೇಶ 28 ಓವರ್‌ಗಳು ಮುಕ್ತಾಯಗೊಂಡಾಗ 2 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಇದು ಟೀಂ ಇಂಡಿಯಾ ವಲಯದಲ್ಲಿ ಕೊಂಚ ಆತಂಕ ಉಂಟು ಮಾಡಿತ್ತು. ಬಾಂಗ್ಲಾ ಬ್ಯಾಟ್ಸ್ ಮನ್ ಗಳಾದ ತಮೀಮ್‌ ಇಕ್ಬಾಲ್‌ ಮತ್ತು ಮುಷ್ಫೀಕರ್‌ ರಹೀಮ್‌ ತಲಾ ಅರ್ಧಶತಕ ಗಳಿಸಿ ಮೈದಾನದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಇವರಿಬ್ಬರನ್ನು ಬೇರ್ಪಡಿಸಲು ನಾಯಕ ಕೊಹ್ಲಿ ಸ್ಪಿನ್ನರ್‌ ಕೇದಾರ್‌ ಜಾಧವ್‌ ಅವರಿಗೆ ಚೆಂಡು ನೀಡಿದ್ದರು. ಆದರೆ ಜಾಧವ್‌ ಅವರನ್ನು ಬೌಲಿಂಗ್‌ಗೆ ಇಳಿಸಲು ನಾಯಕ ವಿರಾಟ್‌ ಕೊಹ್ಲಿಗೆ ಸಲಹೆ ಕೊಟ್ಟಿದ್ದು ಮಾಜಿ ನಾಯಕ ಧೋನಿ ಅಂತೆ. ಹೌದು ಈ ಕುರಿತು ಪಂದ್ಯದ ನಂತರ ಸ್ವತಃ ವಿರಾಟ್‌ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಪಂದ್ಯದ ಮೇಲೆ ನಾವು ಹಿಡಿತ ಸಾಧಿಸಲು ಜಾಧವ್‌ ತೆಗೆದುಕೊಂಡ ಆ ಎರಡು ವಿಕೆಟ್‌ಗಳು ಕಾರಣ. ಜಾಧವ್‌ಗೆ ಈ ಸಮಯದಲ್ಲಿ ಬೌಲಿಂಗ್‌ ನೀಡುವ ನಿರ್ಧಾರ ಕೈಗೊಂಡಿದ್ದು ನಾನು ಮತ್ತು ಧೋನಿ. ಈ ಯಶಸ್ಸಿನ ಸಂಪೂರ್ಣ ಕ್ರೆಡಿಟ್‌ ಧೋನಿಗೆ ಸಲ್ಲಬೇಕು ಎಂದು ವಿರಾಟ್‌ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Great...!
  • Kavya
  • Professional