ಐದು ಲಕ್ಷ ಮಣಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರ !

Kannada News

16-06-2017

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಭಿಮಾನಿಯೊಬ್ಬರು ಬೆಲೆ ಬಾಳುವ ಉಡುಗೊರೆ ನೀಡಿದ್ದಾರೆ. ರಾಜ್ ಕೋಟ್ ನಲ್ಲಿ ವಾಸವಾಗಿರುವ 25 ವರ್ಷದ ಖುಷ್ಬು ಭಾರತದ ನಕಾಶೆಯೊಳಗೆ ಪ್ರಧಾನ ಮಂತ್ರಿ ಮೋದಿ ಚಿತ್ರ ಬಿಡಿಸಿದ್ದಾರೆ. ಈ ಕಲಾಕೃತಿಯ ವಿಶೇಷವೆಂದರೆ ಇದನ್ನು ಕೇವಲ ಮಣಿ ಹಾಗೂ ದಾರದಿಂದ ಮಾಡಲಾಗಿದೆ. ಈ ಕಲಾಕೃತಿಗಾಗಿ ಖುಷ್ಬು 10 ಕಿಮೀ ಉದ್ದದ ದಾರ ಹಾಗೂ 5 ಲಕ್ಷಕ್ಕಿಂತ ಹೆಚ್ಚು ಮಣಿಯನ್ನು ಬಳಸಿದ್ದಾರೆ. ಈ ಕಲಾಕೃತಿ ರಚನೆಗೆ 850 ಗಂಟೆ ಕೆಲಸ ಮಾಡಿದ್ದಾರೆ ಖುಷ್ಬು. ಗುರುವಾರ ಗುಜರಾತಿನ ಸಿಎಂ ವಿಜಯ್ ರೂಪಾನಿ ಹಾಗೂ ಸಚಿವ ಮೋಹನ್ ಕುಂಡಾರಿಯಾ ಜೊತೆ ಖುಷ್ಬು ಕಲಾಕೃತಿಯನ್ನು ಮೋದಿಯವರಿಗೆ ನೀಡಿದ್ದಾರೆ. ಈ ಕಲಾಕೃತಿ 7 ಅಡಿ ಉದ್ದ ಹಾಗೂ 7 ಅಡಿ ಅಗಲವಿದೆ. ಇದು ಸುಮಾರು 350 ಕೆಜಿ ತೂಕವಿದೆ. 950 ಸೂಜಿಗಳನ್ನು ಇದಕ್ಕಾಗಿ ಬಳಸಲಾಗಿದೆಯಂತೆ. ಖುಷ್ಬುಗೆ ಲಿಮ್ಕಾ ಬುಕ್ ದಾಖಲೆಯ ಪ್ರಮಾಣ ಪತ್ರ ಕೂಡ ಸಿಕ್ಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ