ಭಟ್ಕಳದ ಮೊಹಮ್ಮದ್ ಶಫಿ ಆರ್ಮರ್' ಜಾಗತಿಕ ಉಗ್ರ !

Kannada News

16-06-2017

ಉತ್ತರ ಕನ್ನಡ: ಭಟ್ಕಳ ಮೂಲದ ಉಗ್ರ ಮೊಹಮ್ಮದ್ ಶಫಿ ಆರ್ಮರ್' ನನ್ನು ಜಾಗತಿಕ ಉಗ್ರನೆಂದು ಅಮೇರಿಕ ಘೋಷಿಸಿದೆ. ಅಮೇರಿಕಾದ ಹಣಕಾಸು ಸಚಿವಾಲಯ ಜಾಗತಿಕ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ನೇಮಿಸುವ ಕೆಲಸ ಮಾಡುತ್ತಿದ್ದ ಮಹಮ್ಮದ್ ಶಫಿ ಆರ್ಮರ್' ನನ್ನು ಸೇರ್ಪಡೆಗೊಳಿಸಿದೆ. ಭಾರತದಲ್ಲಿ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರ ವಿರುದ್ಧ ಕಾರ್ಯಾಚರಣೆಗಳು ನಡೆದ ಬಳಿಕ, ಆರ್ಮರ್ ತನ್ನ ಸಹೋದರನೊಂದಿಗೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಛೋಟೇ ಮುಲ್ಲಾ, ಅಂಜಾನ್ ಭಾಯ್ ಮತ್ತು ಯೂಸಫ್ ಅಲ್ ಹಿಂದಿ ಮತ್ತಿತರ ಹೆಸರುಗಳನ್ನು ಹೊಂದಿದ್ದ ಆರ್ಮರ್ ವಿರುದ್ಧ ಈ ಹಿಂದೆಯೇ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಐಎಂ ಸಂಸ್ಥಾಪಕ ರಿಯಾಜ್ ಸೇರಿದಂತೆ ಭಟ್ಕಳ ಸಹೋದರರೊಂದಿಗೆ ಭಿನ್ನಮತದ ಬಳಿಕ, ಆರ್ಮರ್ ಅನ್ಸಾರ್ ಉಲ್ ತೌಹೀದ್ ಸಂಘಟನೆ ಹುಟ್ಟುಹಾಕಿದ್ದ. ಇದೀಗ ಈತನನ್ನು ಅಮೇರಿಕ ಜಾಗತಿಕ ಉಗ್ರನೆಂದು ಘೋಷಿಸಿದೆ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ