ಉಗ್ರರು ಅಡಗಿರುವ ಶಂಕೆ ಸೇನೆಯಿಂದ ದಾಳಿ !

Kannada News

16-06-2017

ನವದೆಹಲಿ: ಪಾಕಿಸ್ತಾನ ಭಾರತದ ಮೇಲೆ ಪದೇ ಪದೇ ಕಾಲುಕೆರೆಕೊಂಡು, ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ, ಪ್ರತಿದಾಳಿಯಾದಾಗ ಬಾಲ ಮುದುಡಿಕೊಂಡು ಓಡುವ ಕೃತ್ಯಗಳು ಕೆಳೆದ ಕೆಲದಿನಗಳಿಂದ ನಡೆಯುತ್ತಲೇ ಇವೇ, ಇಂದೂ ಕೂಡ  ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅರ್ವನಿ ಗ್ರಾಮದಲ್ಲಿ ಭಾರತದ ಭದ್ರತಾ ಪಡೆಗಳು ಉಗ್ರರರ ಮೇಲೆ ತೀವ್ರ ದಾಳಿ ಆರಂಭಿಸಿವೆ. ಗ್ರಾಮದ ಮನೆಯೊಂದರಲ್ಲಿ ಮೂವರು ಉಗ್ರರ ಅಡಗಿ ಕೊಂಡಿರುವ ಶಂಕೆಯ ಮೇರೆಗೆ ಸೇನೆ ಗುಂಡಿನ ದಾಳಿ ನಡೆಸಿದೆ. ಇನ್ನು, ಶ್ರೀನಗರದ ವಿಮಾನ ನಿಲ್ದಾಣದ ಮಾರ್ಗದಲ್ಲಿ ಪೊಲೀಸ್ ಪಡೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮನಾಗಿ, ಇಬ್ಬರಿಗೆ ಗಾಯವಾಗಿರುವ ಘಟನೆ ನಡೆದಿತ್ತು. ಶ್ರೀನಗರ ಬಳಿ ಕರ್ತವ್ಯ ನಿರತ ಪೊಲೀಸ್ ಪಡೆ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿ ನಡೆಸಿದ ಬಳಿಕ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದರು. ಗಾಯಗೊಂಡ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರರ ದಾಳಿ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಈಗಾಗಲೇ ಸೇನಾ ಪಡೆ ಕಾರ್ಯಾಚರಣೆ ಆರಂಭಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ