ಚಿಕಿತ್ಸೆ ಇಲ್ಲದೇ ರೋಗಿಗಳ ಪರದಾಟ !

Kannada News

16-06-2017

ಹಾಸನ: ಖಾಸಗಿ ವ್ಯೆದ್ಯಕೀಯ ಸಂಸ್ಥೆ ಗಳ ತಿದ್ದುಪಡಿ ವಿಧೇಯಕ ಜಾರಿ ವಿರೋಧಿಸಿ ನಡೆಯತ್ತಿರುವ ಪ್ರತಿಭಟನೆಯಿಂದ ರೋಗಿಗಳು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಹಾಸನದಲ್ಲಿ ವೈದ್ಯ ಸೇವೆ ಸಿಗದೆ ರೋಗಿಗಳು ಪರಿತಪಿಸುವಂತಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವೈದ್ಯರು ಬೆಂಗಳೂರಿಗೆ  ತೆರಳಿದ್ದರಿಂದ ಆಸ್ಪತ್ರೆಗಳಲ್ಲಿ ರೋಗಿಗಳು ಮಾತ್ರ ಕಂಡುಬರುತ್ತಿದ್ದಾರೆ, ಚಿಕಿತ್ಸೆ ದೊರೆಯದೇ ರೋಗಿಗಳ ಆರೋಗ್ಯ ಮತ್ತಷ್ಟು ಏರುಪೇರಾಗುವ ಆತಂಕದಲ್ಲಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯ ಡಯಾಗ್ನಿಸ್ಟಿಕ್ ಸೆಂಟರ್, ಕ್ಲಿನಿಕ್ ಗಳು ಬಂದ್ ಆಗಿದ್ದರಿಂದ ಹೊರ ರೋಗಿಗಳಿಗೆ ಸೇವೆ ಸ್ಥಗಿತ ಗೊಂಡಿತ್ತು, ಇದರಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಪ್ರತಿಭಟನಾ ವಿಷಯ ತಿಳಿಯದೇ ಆಸ್ಪತ್ರೆಗೆ ಬಂದು ಮುಚ್ಚಿದ್ದನ್ನು ಕಂಡು ವೈದ್ಯರಿಗೆ ಹಿಡಿ ಶಾಪ ಹಾಕುತ್ತಾ ಚಿಕಿತ್ಸೆ ಇಲ್ಲದೇ ಹಾಗೇ ತೆರಳುತ್ತಿದ್ದಾರೆ.    ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ