ಆರೋಗ್ಯಾಧಿಕಾರಿಯ ಮನೆ ಮೇಲೆ ಎಸಿಬಿ ದಾಳಿ !

Kannada News

16-06-2017

ಕೋಲಾರ: ಬೆಳ್ಳಂಬೆಳಗ್ಗೆ ಎಸಿಬಿ ಪೊಲೀಸರು ಆರೋಗ್ಯ ಇಲಾಖೆಯ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಕೋಲಾರದ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಕುಮಾರಗೌಡ ಅವರ ಮುಳಬಾಗಲಿನ ಪಟ್ಟಣದ ನರ್ಸಿಂಗ್ ಹೋಂ ಮೇಲೆ ದಾಳಿ ನಡೆಸಿದ್ದಾರೆ. ಡಾ.ಕುಮಾರಗೌಡ ಕೋಲಾರ ಜಿಲ್ಲಾ ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿದ್ದಾರೆ. ಅಕ್ರಮ ಆಸ್ತಿಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿದೆ. ಮುಳಬಾಗಲು ಪಟ್ಟಣದಲ್ಲಿನ ಮನೆ, ನಿಹಾರಿಕ ನರ್ಸಿಂಗ್ ಹೋಂ, ಕೋಲಾರದಲ್ಲಿನ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಕುಮಾರಗೌಡ ಅವರ ಆಪ್ತ  ಮತ್ತು ಕಾಂಗ್ರೆಸ್ ಮುಖಂಡ ಕಲ್ಲುಪಲ್ಲಿ ಪ್ರಕಾಶ್ ಅವರ ಬೆಂಗಳೂರಿನ ಕೆಆರ್ ಪುರಂ ಮನೆಯ ಮೇಲೂ ದಾಳಿ ನಡೆಸಿದರು. ಕೋಲಾರದ ಎಸಿಬಿ ಡಿ.ವೈ.ಎಸ್.ಪಿ ಮೋಹನ್ ನೇತೃತ್ವದ ತಂಡದಿಂದ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರದ ರೋಗ್ಯಾಧಿಕಾರಿಯಾದ ಡಾ.ಕುಮಾರಗೌಡ ಅವರ ಮೇಲೆ ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬಂದ ಹಿನ್ನೆಲೆ ದಾಳಿ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ