ಡೆತ್ ನೋಟ್ ಬರೆದಿಟ್ಟು ಬಿಎಂಟಿಸಿ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ !

Kannada News

16-06-2017

ಬೆಂಗಳೂರು: ಮೇಲಧಿಕಾರಿಗಳ ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವೊಮ್ಮೆ ಈ ಪ್ರಕರಣಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬೇಸತ್ತಿರುತ್ತಾರೆ. ಇದಕ್ಕೆ ಉದಾರಣೆಯೆಂಬಂತೆ ಬಿ.ಎಂ.ಟಿ.ಸಿ ಡಿಪೋ ಒಂದರಲ್ಲಿ ಟೆಕ್ನಿಷಿಯನ್ ಆಗಿ ಕೆಲಸಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೇಲಧಿಕಾರಿಗಳ ಕಿರುಕುಳ ಸಹಿಸಲಾರದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಹೊಸಕೋಟೆಯ ಬಿಎಂಟಿಸಿ ಡಿಪೋ ನಂ ೩೯ ರಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತಿದ್ದ ಮಂಜುನಾಥ್ ಎಂಬುವರು ಅಧಿಕಾರಿಗಳ ಕಿರುಕುಳ ಸಹಿಸದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲೆತ್ನಿಸಿದ್ದಾರೆ. ಡೆತ್ ನೋಟ್ ನಲ್ಲಿ ಡಿಪೋ ಮ್ಯಾನೇಜರ್ ಲಕ್ಷ್ಮಿಪ್ರಸಾದ್ ಹಾಗು ಸಿ.ಎಂ.ಸೋಮಶೇಖರ್ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ನನ್ನ ಸಾವಿಗೆ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ಇಂದು ಮಂಜುನಾಥ್ ತನ್ನ ಗ್ರಾಮವಾದ ಜಡಿಗೆನಹಳ್ಳಿಯಲ್ಲಿ ವಿಷ ಸೇವಿಸಿದ್ದಾರೆ, ವಿಷ ಕುಡಿದು ಒದ್ದಾಡುತ್ತಿದ್ದ ಮಂಜುನಾಥ್ ನನ್ನ ಕಂಡ ಊರಿನವರು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಮಂಜುನಾಥ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ, ಇನ್ನು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ