ವಾಹನಗಳ ನೊಂದಣಿ ಫಲಕದ ಮೇಲೆ ಸಂಘಟನೆಗಳ ಹೆಸರು ಕಾನೂನು ಬಾಹಿರ !

Kannada News

15-06-2017

ಬೆಂಗಳೂರು: ವಾಹನಗಳ ನೊಂದಣಿ ಫಲಕದ ಮೇಲೆ ಸಂಘಟನೆಗಳ ಹೆಸರು ಬರೆಸಿಕೊಳ್ಳುವುದು ಕಾನೂನು ಬಾಹಿರವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ಶೂನ್ಯವೇಳೆಯಲ್ಲಿ ಬಿಜೆಪಿಯ ಎಸ್.ಸುರೇಶ್‍ಕುಮಾರ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು,ಸಾರಿಗೆ ಇಲಾಖೆಯಲ್ಲಿ ಕೇವಲ 350 ಇನ್ಸ್ ಪೆಕ್ಟರ್‍ಗಳಿದ್ದಾರೆ. ಈ ಪೈಕಿ ಈ ಪೈಕಿ ಶೇಕಡಾ 50 ಮಂದಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇನ್ನುಳಿದ ಸಿಬ್ಬಂದಿಯಿಂದ ಕ್ರಮ ಕೈಗೊಳ್ಳಲು ಕಷ್ಟವಾಗುತ್ತದೆ. ಈ ಬಗ್ಗೆ ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಪೊಲೀಸರು ಇಂತಹ ವಾಹನಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ