ಚರಂಡಿ ಮೂಲಕ ಸುರಂಗ ಕೊರೆದು ಚಿನ್ನಾಭರಣ ಲೂಟಿ !

Kannada News

15-06-2017

ಬೆಂಗಳೂರು: ಚರಂಡಿ ಮೂಲಕ ಸುರಂಗ ಕೊರೆದು ಚಿನ್ನಾಭರಣ ಅಂಗಡಿಗೆ ನುಗ್ಗಿ 300 ಗ್ರಾಂ ಚಿನ್ನ ಹಾಗೂ ಸಾವಿರಾರು ರೂ. ಮೌಲ್ಯದ ಬೆಳ್ಳಿಯನ್ನು ಕಳ್ಳತನ ಮಾಡಿರುವ ಘಟನೆ ಕೆ.ಆರ್. ಪುರಂನ ದೇವಸಂದ್ರ ಮುಖ್ಯರಸ್ತೆಯಲ್ಲಿ ನಡೆದಿದೆ. ದೇವಸಂದ್ರ ಮುಖ್ಯರಸ್ತೆಯ ಬಾಲಾಜಿ ಜ್ಯುವೆಲರಿ ಮತ್ತು ಬ್ಯಾಂಕರ್ಸ್‍ಗೆ ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಬಾಲಾಜಿ ಜ್ಯುವೆಲರಿ ಅಂಗಡಿಗೆ  ನುಗ್ಗಿರುವ ದುಷ್ಕರ್ಮಿಗಳು ಬೆಳ್ಳಿ, ಚಿನ್ನ ಹಾಗೂ 50 ಸಾವಿರ ನಗದು ಕದ್ದೊಯ್ದಿದ್ದಾರೆ. ಗುರುವಾರ ಬೆಳಿಗ್ಗೆ ಜ್ಯುವೆಲರಿ ಶಾಪ್‍ನ ಮಾಲೀಕ ಮೋಹನ್ ಲಾಲ್ ಅಂಗಡಿಯ ಬಾಗಿಲು ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೆ.ಆರ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಪುರಂ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಕೃತ್ಯವೆಸಗಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ