25 ಸಾವಿರ ಲಂಚ ಸ್ವೀಕರಿಸುತ್ತಿದ್ದ ಭ್ರಷ್ಟ ಅಧಿಕಾರಿಯ ಬಂಧನ !

Kannada News

15-06-2017

ಬೆಂಗಳೂರು: ಭೂ ಪರಿವರ್ತನೆಗೆ 25 ಸಾವಿರ ಲಂಚ ಸ್ವೀಕರಿಸುತ್ತಿದ್ದ ಭೂಮಾಪಕ ಸೇರಿ ಇಬ್ಬರು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದ ಬಲಗೆ ಬಿದ್ದಿದ್ದಾರೆ. ಕರ್ನಾಟಕ ಗೃಹ ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯ ಭೂಮಾಪಕ ಬಸವರಾಜು ಮತ್ತು ಎಸ್‍ಡಿಎ ಶಿವಸ್ವಾಮಿ ಬಲಗೆ ಬಿದ್ದವರು. ಹುಳಿಮಾವು ನಿವಾಸಿಯೊಬ್ಬರು ಸಂಬಂಧಿಕರೊಬ್ಬರ ಆನೇಕಲ್ ತಾಲೂಕಿನಲ್ಲಿರುವ 5 ಎಕರೆ ಜಮೀನಿನ ಭೂಪರಿವರ್ತನೆಗಾಗಿ ಅನುಮತಿ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಭೂ ಪರಿವರ್ತನೆಗಾಗಿ ಅನುಮತಿ ನೀಡಲು ರೂ.25,000 ಗಳ ಲಂಚ ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು. ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ನಿನ್ನೆ ಕಚೇರಿಯಲ್ಲಿ ರೂ.25,000 ಗಳ ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ