ಕೈ ಹಿಡಿದ ಪತ್ನಿಯನ್ನೇ ಮಾನಭಂಗ ಮಾಡಲು ಯತ್ನ !

Kannada News

15-06-2017

ಬೆಂಗಳೂರು: ಸ್ನೇಹಿತನ ಜೊತೆ ಸೇರಿ ಕೈ ಹಿಡಿದ ಪತ್ನಿಯ ಮಾನಭಂಗಕ್ಕೆ ಯತ್ನಿಸಿದ ಪತಿ ಹಾಗೂ ಆತನ ಸ್ನೇಹಿತನನ್ನು ನಗರದ ವಿಮಾನನಿಲ್ದಾಣ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸಂತ್ರಸ್ಥ ಮಹಿಳೆ ನೀಡಿದ ದೂರು ಆಧರಿಸಿ ಪತಿ ಮುನಿರಾಜ್ ಹಾಗೂ ಆತನ ಸ್ನೇಹಿತ ರವಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾದಹಳ್ಳಿ ಗೇಟ್ ಬಳಿ ವಾಸಿಸುತ್ತಿದ್ದ ಆರೋಪಿ ಮುನಿರಾಜುಗೆ ಮದುವೆಯಾಗಿ 18 ವರ್ಷಗಳೇ ಕಳೆದಿದ್ದರೂ, ಮೊದಲ ಹೆಂಡತಿಗೆ ಗೊತ್ತಾಗದ ಹಾಗೆ ಮತ್ತೊಂದು ಮದುವೆ ಮಾಡಿಕೊಂಡಿದ್ದ. ಕಳೆದ ಮೂರು ದಿನಗಳ ಹಿಂದೆ ಸ್ನೇಹಿತನ ಜೊತೆ ಮೊದಲ ಹೆಂಡತಿಯ ಮನೆಗೆ ಬಂದ ಮುನಿರಾಜ ಚೆನ್ನಾಗಿ ಕುಡಿದು ಸ್ನೇಹಿತನ ಜೊತೆಯಲ್ಲಿ ಹಾಸಿಗೆ ಹಂಚಿಕೊಳ್ಳುವಂತೆ  ಹೇಳಿದ್ದಾನೆ. ಆಕ್ರೋಶಗೊಂಡ ಆಕೆ ಜಗಳ ತೆಗೆದಾಗ ಮುನಿರಾಜ ಮತ್ತವನ ಸ್ನೇಹಿತ ಸೇರಿ ಆಕೆಯ ಸೀರೆ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ತಾಯಿಯ ಸಹಾಯಕ್ಕೆ ಬಂದ ಮಕ್ಕಳನ್ನು ಇದೇ ಆರೋಪಿಗಳು ಥಳಿಸಿದ್ದಾರೆ. ಮಕ್ಕಳ ಕೂಗಾಟ ಕೇಳಿದ ಸ್ಥಳೀಯರು ಮನೆ ಬಳಿ ಬಂದು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ