ಮೋಜಿನ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದವರ ಬಂಧನ !

Kannada News

15-06-2017

ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಜಯನಗರ ಪೊಲೀಸರು ಮೂರುವರೆ ಲಕ್ಷ ಮೌಲ್ಯದ 125 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಿಲ್ಸನ್ ಗಾರ್ಡನ್ ನ ವಿನಾಯಕ ನಗರದ ನಾಗರಾಜ ಅಲಿಯಾಸ್ ಮೈನ್‍ಗೇಟ್ (42), ಕೊಡಗು ಜಿಲ್ಲೆಯ ಹಾತೂರಿನ ಉದಯ್ ಅಲಿಯಾಸ್ ನೀರ್ ಮಜ್ಜಿಗೆ (30) ಬಂಧಿತ ಕಳ್ಳರಾಗಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ. ಬಂಧಿತರಿಂದ ಮೂರುವರೆ ಲಕ್ಷ ಮೌಲ್ಯದ 125 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನಗರದ ವಿವಿಧೆಡೆ ಹಾಗೂ ತಮಿಳುನಾಡಿನಲ್ಲಿ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳವು ಮಾಡುತ್ತಿದ್ದರು. ಮೋಜಿನ ಜೀವನ ನಡೆಸಲು ಆರೋಪಿಗಳು ಕೃತ್ಯದಲ್ಲಿ ತೊಡಗಿದ್ದು, ಇವರ ಬಂಧನದಿಂದ ಜಯನಗರ ಹಾಗೂ ತಮಿಳುನಾಡಿನ ಮತ್ತಿಗಿರಿ ಪೊಲೀಸ್ ಠಾಣೆಯ ತಲಾ 1 ಕಳವು ಪ್ರಕರಣಗಳು ಪತ್ತಯಾಗಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ