ಶಾರ್ಟ್ ಸರ್ಕ್ಯೂಟ್ ನಿಂದ ಚಪ್ಪಲಿ ಅಂಗಡಿಗಳಿಗೆ ಬೆಂಕಿ !

Kannada News

15-06-2017

ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್‍ನ ಸಫೀನಾ ಫ್ಲಾಜ ಬಳಿಯ ಪಾಲಿಕೆ ಕಟ್ಟಡದಲ್ಲಿರುವ ಎರಡು ಚಪ್ಪಲಿ ಅಂಗಡಿಗಳಿಗೆ ಗುರುವಾರ  ನಸುಕಿನಲ್ಲಿ ಅಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ನಷ್ಟ ಸಂಭವಿಸಿದದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಫೀನಾ ಫ್ಲಾಜ ಬಳಿಯ ಪಾಲಿಕೆ ಕಟ್ಟಡದಲ್ಲಿರುವ ಚಪ್ಪಲಿ ಅಂಗಡಿಯೊಂದಕ್ಕೆ ಮುಂಜಾನೆ 4.30ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಪಕ್ಕದ ಅಂಗಡಿಗೂ ವ್ಯಾಪಿಸಿ ಚಪ್ಪಲಿಗಳು ಶೂಗಳು ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಚಪ್ಪಲಿಗಳು ಸುಟ್ಟು ದಟ್ಟ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಆಗ್ನಿಶಾಮಕದ ದಳದ ಎರಡು ವಾಹನಗಳು ಬೆಂಕಿ ನಂದಿಸಿವೆ. ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎರಡು ಅಂಗಡಿಗಳಲ್ಲಿದ್ದ ಚಪ್ಪಲಿ ಶೂಗಳು ಸುಟ್ಟು 2 ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಆರ್.ಪಿ.ಸಿ ಲೇಔಟ್‍ನ ಸಾಗರ್ ಹೊಟೇಲ್‍ನ ಅಡುಗೆ ಕೋಣೆಯಲ್ಲಿ ಬುಧವಾರ ರಾತ್ರಿ ಅಕಸ್ಮಿಕ ಬೆಂಕಿ ತಗುಲಿ ಅಡುಗೆಗೆ ಬಳಸುತ್ತಿದ್ದ ವಸ್ತುಗಳು ಸುಟ್ಟು ಹೋಗಿದ್ದು ರಾತ್ರಿ 11.35ರ ವೇಳೆ ಈ ದುರ್ಘಟನೆ ಸಂಭವಿಸಿದೆ, ಕೂಡಲೆ ಆಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ