ಮೈಸೂರು ಅರಮನೆಯಲ್ಲಿ ಸಂಭ್ರಮ !

Kannada News

15-06-2017

ಮೈಸೂರು: ರಾಜಮಾತಾ ಪ್ರಮೋದಾದೇವಿ ಒಡೆಯರ್ ಅವರ ದತ್ತು ಪುತ್ರ ಯದುವೀರ್ ಅವರ ಪತ್ನಿ ತ್ರಿಷಿಕಾ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಹಾರಾಣಿ ತ್ರಿಷಿಕಾಕುಮಾರಿ 4 ತಿಂಗಳ ಗರ್ಭಿಣಿಯಾಗಿದ್ದು ಈ ಸುದ್ದಿಯಿಂದ ಅರಮನೆಗೆ ಬರುವ ಮಗುವಿನ ಆಗಮನಕ್ಕೆ ರಾಜವಂಶಸ್ಥರು ಕಾತರದಿಂದ ಕಾಯುವಂತಾಗಿದೆ. ದಸರಾ ವೇಳೆಗೆ ಯುವರಾಜ/ರಾಣಿ ಬರುವ ನಿರೀಕ್ಷೆಯಿದ್ದು , ರಾಜ ಪರಿವಾರದಲ್ಲಿ ಸಂಭ್ರಮಕ್ಕೆ ಎಡೆಮಾಡಿಕೊಟ್ಟಿದೆ. ಮೈಸೂರು ರಾಜ ವಂಶಸ್ಥರಿಗೆ ಅಲಮೇಲಮ್ಮ ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಒಡೆಯರಿಗೆ ಮಕ್ಕಳಾಗದಿರಲಿ ಎಂಬ ಶಾಪವಿತ್ತಿದ್ದ ಹಿನ್ನೆಲೆಯಲ್ಲಿ ಈ ವಂಶಸ್ಥರಿಗೆ ಸಂತಾನ ಭಾಗ್ಯವಿರಲಿಲ್ಲ. ಹಾಗಾಗಿ ಯುವರಾಜ ಯದುವೀರ್ ಮತ್ತು ತ್ರಿಷಿಕಾಕುಮಾರಿ ಅವರಿಂದ ರಾಜಮಾತೆ ಪ್ರಮೋದಾ ದೇವಿ ಅಲಮೇಲಮ್ಮನ ದೇವಾಲಯದಲ್ಲಿ ಪ್ರಾಯಶ್ಚಿತ ಪೂಜೆ ನೆರವೇರಿಸಿದ್ದರು. ಇದೀಗ ದೇವರ ಕರುಣೆಯಿಂದ ಮತ್ತೆ ಅರಮನೆಯಲ್ಲಿ ಮಗುವಿನ ನಗು ಕೇಳುವ ಸಂದರ್ಭ ಒದಗಿ ಬಂದಿರುವುದರಿಂದ ಸಂತಸ ಮೇರೆ ಮೀರಿದೆ. ದಸರಾ ವೇಳೆಗೆ ಮಗುವಿನ ಜನನವಾಗುವ ಸಾಧ್ಯತೆ ಇದೆ ಎಂದು ಅರಮನೆ ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ