ಜಾನುವಾರುಗಳ ಅಂಕಿ-ಅಂಶ ತಿದ್ದಿ ಕೋಟ್ಯಂತರ ರೂಪಾಯಿ ಗುಳುಂ ?

Kannada News

15-06-2017

ಬೆಂಗಳೂರು: ಸರ್ಕಾರಿ ಗೋ ಶಾಲೆಗಳಲ್ಲಿ ಜಾನುವಾರುಗಳ ಅಂಕಿ ಅಂಶಗಳನ್ನು ತಿದ್ದಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿರೋಧಪಕ್ಷದ ನಾಯಕ ಈಶ್ವರಪ್ಪ ವಿಧಾನಪರಿಷತ್‍ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆ ನೆಪದಲ್ಲಿ ಗೋವುಗಳಿಗೆ ಒದಗಿಸುತ್ತಿರುವ ಮೇವಿನಲ್ಲಿ ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದರು. ಇತ್ತೀಚೆಗೆ ಮುಖ್ಯಮಂತ್ರಿಗಳು ಕಲಬುರ್ಗಿಗೆ ಭೇಟಿ ನೀಡಿದಾಗ ಗೋಶಾಲೆಯಲ್ಲಿ 375 ಹಸುಗಳಿದ್ದವು. ನಾನು ಭೇಟಿ ನೀಡಿದ್ದಾಗ 275 ಹಸುಗಳಿದ್ದವು. ಅದನ್ನು ನಿರ್ವಹಣೆ ಮಾಡುವವರನ್ನು ಹಿಡಿದು ಕೇಳಿದಾಗ ಇಲ್ಲಿ 175 ಹಸುಗಳು ಇವೆ ಎಂದು ಹೇಳಿದ್ದರು. ಈ ರೀತಿ ಅಂಕಿ ಸಂಖ್ಯೆಗಳನ್ನು ತಿದ್ದಿ ಹಣ ಹೊಡೆಯುತ್ತಿರುವುದಲ್ಲದೇ ಹಲವೆಡೆ ಹಸುಗಳೂ ಇಲ್ಲ, ಮೇವು ಇಲ್ಲ ಆದರೆ ಲೆಕ್ಕ ಮಾತ್ರ ಇದೆ ಎಂದು ಆರೋಪಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ