ಪೆಟ್ರೋಲ್ ವಿತರಕರ ಒಕ್ಕೂಟದಿಂದ ಬಂದ್ ವಾಪಸ್ !

Kannada News

15-06-2017

ನವದೆಹಲಿ: ಪೆಟ್ರೋಲ್ ದರ ಪರಿಷ್ಕರಣೆ ವಿರೋಧಿಸಿ ನಾಳೆ ಕರೆ ನೀಡಿದ್ದ ಬಂದ್ ಹಿಂದಕ್ಕೆ ಪಡೆದಿರುವುದಾಗಿ ಪೆಟ್ರೋಲಿಯಂ ವಿತರಕರ ಒಕ್ಕೂಟ ಹೇಳಿದೆ. ಹೀಗಾಗಿ ವಾಹನ ಸವಾರರಿಗೆ ನಿರಾಳತೆ ಮೂಡಿದೆ. ಜೂನ್ 15 ರ ಮಧ್ಯರಾತ್ರಿಯಿಂದ ಜೂನ್ 16 ರ ಮಧ್ಯರಾತ್ರಿಯವರೆಗೆ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಿ, ದೇಶಾದ್ಯಂತ ಮುಷ್ಕರ ನಡೆಸಲು ಪೆಟ್ರೋಲಿಯಂ ಡೀಲರ್ ಗಳು ಮುಂದಾಗಿದ್ದರು. ಆದರೆ ಮಾತುಕತೆ ಸಫಲವಾದ ಹಿನ್ನೆಲೆ ಮುಷ್ಕರವನ್ನು ಕೈಬಿಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಜೂನ 16 ರಿಂದಲೇ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪರಿಷ್ಕರಣೆ ನೀತಿ ಜಾರಿಯಾಗಲಿದೆ. ಮಧ್ಯರಾತ್ರಿ 12 ಗಂಟೆಗೆ ಬದಲಾಗಿ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಗೆ ಅವಕಾಶ ನೀಡಬೇಕೆಂದು ಡೀಲರ್ ಗಳು ಬೇಡಿಕೆ ಇಟ್ಟಿದ್ದು, ಇದಕ್ಕೆ ಪೆಟ್ರೋಲಿಯಂ ಸಚಿವಾಲಯ ಸಮ್ಮತಿಸಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲಾಗಿದೆ. ಪೆಟ್ರೋಲ್ ,ಡೀಸಲ್ ಡೀಲರ್ಸ್ ಅಸೋಸಿಯೇಷನ್ ಜೊತೆಗೆ ಸಭೆ ಸಫಲವಾದ ಬಳಿಕ, ಮಾತನಾಡಿದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್, ಡೀಸಲ್ ಡೀಲರ್‍ ಗಳ ಜೊತೆ ಮಾತುಕತೆ ಸಫಲವಾಗಿದೆ. ಪ್ರತಿದಿನ ಬೆಲೆಗಳಲ್ಲಿನ ಏರಿಳಿತಕ್ಕೆ ಒಪ್ಪಿಗೆ ಸೂಚಿಸಿದ್ದು. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ದಿನ ಬೆಳಗ್ಗೆ 6ಗಂಟೆಗೆ ವ್ಯತ್ಯಾಸ ಕಾಣಲಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ