ರೈತರ ಮೇಲೆ ಶಾಸಕನ ದರ್ಪ !

Kannada News

15-06-2017

ಔರಂಗಾಬಾದ್:- ಮಹಾರಾಷ್ಟ್ರದಲ್ಲಿ ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ, ಇತ್ತೀಚೆಗಷ್ಟೆ, ಮಧ್ಯಪ್ರದೇಶದ ರೈತರು ಹೋರಾಟದಲ್ಲಿ ಆರು ಮಂದಿ  ಪ್ರಾಣ ಕಳೆದುಕೊಂಡಿದ್ದರೆ. ಇದರ ಮಧ್ಯೆಯೇ ಮಹಾರಾಷ್ಟ್ರದ ಶಾಸಕ ಭೂವಿವಾದದಲ್ಲಿ ರೈತರನ್ನು ನಿಂದಿಸಿ ಹೊಡೆಯುತ್ತಿರುವುದರ ಬಗ್ಗೆ ವರದಿಯಾಗಿದೆ. ಈ ಘಟನೆಯು ಕಳೆದ ಜೂನ್ 12 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ವೀಡಿಯೊ ಒಂದನ್ನು ಬಿಡುಗಡೆಯಾಗಿದ್ದು, ಶಾಸಕನಿಂದ ನಿಂದನೆಗೆ ಒಳಗಾಗಿದ್ದ ರೈತರೇ ಈ ಕುರಿತು ವೀಡಿಯೊ  ಬಿಡುಗಡೆ ಮಾಡಿದ್ದು, ಶಾಸಕರಾದ ಅಬ್ದುಲ್ ಸತ್ತಾರ್ ಮತ್ತು ಆತನ ಮಗನ ವಿರುದ್ಧ ಲಿಖತ ದೂರು ನೀಡಿರುವುದಾಗಿ ಹೇಳಿದ್ದಾರೆ. ಆದರೆ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲವೆಂದು ದೂರಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ  25 ರಿಂದ 30 ಜನರಿಂದ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ಅಬ್ದುಲ್ ಸತ್ತರ್  ರೈತರಿರುವ ಭೂಮಿಯನ್ನು ಮಾರಲಾಗಿದ್ದು, ಅದನ್ನು ನೀಡಲು ಒಪ್ಪದಿದ್ದಾಗ ಬಿಡಿಸುವ ಪ್ರಯತ್ನ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದು ಬಿಜೆಪಿಯ ಪಿತೂರಿ ಎಂದು ಕೂಡ ಆರೋಪಿಸಿದ್ದಾರೆ. ಆದರೆ ಈ ಕುರಿತು ಪ್ರಕರಣ ದಾಖಲಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.       


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ