ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ ಎಂದು ಆರೋಪಿದ ನಟಿ !

Kannada News

14-06-2017

ಬೆಂಗಳೂರು:- ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಎಂಜಿನಿಯರೊಬ್ಬರ ವಿರುದ್ಧ ಯುವ ನಟಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಆಗಿರುವ ಉಲ್ಲಾಸ್ ಪಟೇಲ್ ಎಂಬಾತನ ವಿರುದ್ಧ ನಟಿ ನೀಡಿರುವ ದೂರು ದಾಖಲಿಸಿರುವ ಸದಾಶಿವನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಉಲ್ಲಾಸ್ ಹಾಗೂ ನಟಿ ಒಂದು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದ್ದು, ಕಳೆದ 8 ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದು ಕಳೆದ ಒಂದು ತಿಂಗಳಿನಿಂದ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ಇದ್ದರು ಎಂದು ತಿಳಿದುಬಂದಿದೆ. ಕಳೆದ ಜೂನ್ 3 ರಂದು ಮೈಸೂರಿಗೆ ತೆರಳಿ ವಾಪಸ್ ಬರುವಷ್ಟರಲ್ಲಿ ಉಲ್ಲಾಸ್ ನಾಪತ್ತೆಯಾಗಿದ್ದಾನೆ. ಬಳಿಕ ಮೊಬೈಲ್ ಮುಖಾಂತರ ಉಲ್ಲಾಸ್ ಸಂಪರ್ಕಕ್ಕೆ ಸಿಕ್ಕಿದ್ದು. ನಮ್ಮ ಮದುವೆಗೆ ಪೋಷಕರು ಒಪ್ಪುತ್ತಿಲ್ಲ ಎಂದು ಉಲ್ಲಾಸ್ ಹೇಳಿದ್ದಾನೆ. ಜೊತೆಗೆ ಉಲ್ಲಾಸ್ ತಾಯಿ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಟಿ ದೂರಿದ್ದಾರೆ. ಅಷ್ಟೇ ಅಲ್ಲದೇ ಜೂನ್ 2ರಂದು ಉಲ್ಲಾಸ್, ಆತನ ಸ್ನೇಹಿತ ಪ್ರೀತಂ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ನೇಹಿತರ ಬಗ್ಗೆ ಕೆಟ್ಟದಾಗಿ ಮಾತನಾಡಿಸಿ ಉಲ್ಲಾಸ್ ಅದನ್ನು ಆಡಿಯೋ ರೆಕಾರ್ಡ್ ಮಾಡಿದ್ದ ಎಂದು ವಂಚನೆಗೊಳಗಾದ ನಟಿ ಆರೋಪಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಉಲ್ಲಾಸ್ ವಿರುದ್ಧ 376, 417 ಅಡಿಯಲ್ಲಿ ಅತ್ಯಾಚಾರ, ವಂಚನೆ ದೂರು ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ