ಪೊಲೀಸ್ ಠಾಣೆಯನ್ನೇ ಬಾರ್ ಮಾಡಿಕೊಂಡ ಪೊಲೀಸರು !

Kannada News

14-06-2017

ವಿಜಯಪುರ:- ಪೊಲೀಸ್ ಇಲಾಖೆ ಹಾಗೂ ಪೊಲೀಸರ ಕಾರ್ಯ ಕ್ಷಮತೆಯನ್ನು ಸುಧಾರಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವ ನಡುವೆಯೇ ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿರುವ ಕಿಡಿಗೇಡಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವಿಜಯಪುರದ ಜಲನಗರ ಠಾಣೆಯ ಸಿಬ್ಬಂದಿ ಹಾಡುಹಗಲೇ ಠಾಣೆ ಆವರಣದಲ್ಲಿ ಬಾರ್ ಎಂಬಂತೆ ಕುಳಿತು ಮದ್ಯಪಾನ ಮಾಡಿ ಪೊಲೀಸ್ ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಠಾಣೆಯ ಎಎಸ್‍ಐ ಮತ್ತು ಇಬ್ಬರು ಸಿಬ್ಬಂದಿ ಮಟಮಟ ಮಧ್ಯಾಹ್ನ ಠಾಣೆ ಆವರಣದಲ್ಲಿ ಮದ್ಯ ಸೇವಿಸುವುದಲ್ಲದೇ ಮಾಂಸದೂಟವನ್ನೂ ಮಾಡಿದ್ದಾರೆ. ವಿಶೇಷವೆಂದರೆ ಈ ಕಿಡಿಗೇಡಿ ಪೊಲೀಸರಿಗೆ ಸರ್ವರ್ ಆಗಿ ಸೇವೆ ಸಲ್ಲಿಸಿರುವುದು ಒಬ್ಬ ಮಹಿಳಾ ಸಿಬ್ಬಂದಿ ಎಂಬುದು ತೀರಾ ನೋವಿನ ವಿಷಯ. ಠಾಣೆಯಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಅನಿವಾರ್ಯವಾಗಿ ತನ್ನ ಮೇಲಧಿಕಾರಿ(ಎಎಸ್‍ಐ) ಎದುರು ಮಾತನಾಡಲು ಹೆದರಿ ಅವರ ಆದೇಶದಂತೆ ಗ್ಲಾಸ್‍ಗಳಿಗೆ ಮದ್ಯ ಸುರಿದು ಕೊಡುವುದು, ಆವರಣದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ಕುಡಿಯುವಂತೆ ಚೇರ್‍ ಮೇಲೆ ಕುಳಿತ ಎಎಸ್‍ಐ ಮತ್ತು ಇಬ್ಬರು ಸಿಬ್ಬಂದಿಗಳು ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಕುಳಿತಿರುವ ದೃಶ್ಯಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ