ಬಾಕಿ ಉಳಿದಿರುವ 5000 ಕೋಟಿ ವಸೂಲಾತಿಗೆ ಆರ್.ಬಿ.ಐ ಸೂಚನೆ !

Kannada News

14-06-2017

ನವದೆಹಲಿ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ದೇಶದ ವಿವಿಧ ಬ್ಯಾಂಕ್ ಗಳಲ್ಲಿ 5000 ಕೋಟಿ ರೂಪಾಯಿ ಸಾಲ ಬಾಕಿ ಉಳಿದಿರುವ ತಲಾ 12 ಖಾತೆಗಳನ್ನು ಗುರುತಿಸಿದ್ದು, ದಿವಾಳಿತನ ಕಾನೂನಿನ ಅಡಿಯಲ್ಲಿ ಈ ಸಾಲವನ್ನು ತಕ್ಷಣ ವಸೂಲಾತಿ ಮಾಡುವಂತೆ ಉಲ್ಲೇಖಿಸಿದೆ. ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಮಾಡದೆ ಉಳಿಸಿಕೊಂಡಿರುವವರ ಹೆಸರುಗಳನ್ನು ಬಹಿರಂಗವಾಗಿ ಸೂಚಿಸದ ಆರ್.ಬಿ.ಐ, ಬಾಕಿ ಸಾಲಗಳನ್ನು ಮರುಪಡೆದುಕೊಳ್ಳಲು ದಿವಾಳಿತನ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಬ್ಯಾಂಕುಗಳಿಗೆ ಸೂಚಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಸುಮಾರು 8 ಲಕ್ಷ ಕೋಟಿ ರೂಪಾಯಿಗೂ ಅಧಿಕ ಅನುತ್ಪಾದಕ ಆಸ್ತಿಗಳು ಬಾಕಿ ಉಳಿದುಕೊಂಡಿದ್ದು ಅವುಗಳಲ್ಲಿ 6 ಲಕ್ಷ ಕೋಟಿ ರೂಪಾಯಿ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿವೆ ಎಂದು ತಿಳಿಸಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ