ಬಾಂಗ್ಲಾದಿಂದ ಭಾರತೀಯ ಕ್ರಿಕೆಟಿಗರಿಗೆ ಅವಮಾನ !

Kannada News

14-06-2017

ನವದೆಹಲಿ:- ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಹಂತ ತಲುಪಿದೆ. ನಾಳೆ ಭಾರತ-ಬಾಂಗ್ಲಾದೇಶದೊಂದಿಗೆ ಸೆಣೆಸಾಡಲಿದೆ. ಬಾಂಗ್ಲಾ-ಭಾರತ ಪಂದ್ಯಕ್ಕೂ ಮೊದಲೇ ಬಾಂಗ್ಲಾ ಅಭಿಮಾನಿಗಳು ಭಾರತ ಹಾಗೂ ಭಾರತೀಯ ಆಟಗಾರರಿಗೆ ಅವಮಾನ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜ ಹಾಗೂ ಭಾರತೀಯ ಆಟಗಾರರಿಗೆ ಅವಮಾನ ಮಾಡುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದ್ದು. ಬಾಂಗ್ಲಾ ದೇಶವನ್ನು ಹುಲಿಯ ರೂಪದಲ್ಲಿ ಬಿಂಬಿಸಲಾಗಿದೆ. ಭಾರತೀಯ ಆಟಗಾರರ ಅರ್ಧ ತಲೆ ಬೋಳಿಸಿ ಆ ಫೋಟೋಗಳನ್ನು ಹಾಕಲಾಗಿದೆ. ಜೂನ್ 14 ರಂದು ಇಂಗ್ಲೆಂಡ್ –ಪಾಕಿಸ್ತಾನ ಸೆಮಿಫೈನ್ ಹಣಾಹಣಿ ನಡೆಸಲಿದೆ. ಜೂನ್ 15ರಂದು ಭಾರತ-ಬಾಂಗ್ಲಾ ಸೆಣೆಸಾಡಲಿದೆ. ಕಳೆದ ವರ್ಷ ಕೂಡ ಬಾಂಗ್ಲಾ ಅಭಿಮಾನಿಗಳು ಆಗಿನ ನಾಯಕ ಎಂ.ಎಸ್. ಧೋನಿಗೆ ಅವಮಾನ ಮಾಡಿ ಫೋಟೋ ಹಾಕಿದ್ದರು. ಇದೀಗ ಮತ್ತೆ ಭಾರತೀಯ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ನಡೆದುಕೊಂಡಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ