ರೈತರ ಆತ್ಮ ಹತ್ಯೆಗೆ ಅವರ ವೈಯಕ್ತಿಕ ಕಾರಣಗಳಿರಬಹುದು !

Kannada News

14-06-2017

ನವದೆಹಲಿ:- ರೈತರ ಸಮಸ್ಯೆಗಳು  ಒಂದೆರಡಲ್ಲ, ಅವರ ಸಮಸ್ಯೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸದಿರುವುದು, ಈ ಎಲ್ಲಾ ಸಮಸ್ಯೆಗಳಿಗೂ  ಕಾರಣವೆಂಬುದು ಎಲ್ಲರಿಗೂ ತಿಳಿದಿದೆ, ಆದರೆ ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಸಮಸ್ಯೆಗಳನ್ನು ಜಟಿಲಗೊಳಿಸುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ, ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ  ಸಿಂಗ್ ರೈತರ ಹೋರಾಟ ಮತ್ತು ಅವರ ಆತ್ಮ ಹತ್ಯೆಗಳ ಕುರಿತಂತೆ, ರೈತರ ಆತ್ಮ ಹತ್ಯೆಗಳು ಅವರ ವೈಯುಕ್ತಿಕ ಕಾರಣಗಳಿಂದ ಎಂದು ರೈತರ ವಿರೋಧಿ ಹೇಳಿಕೆ ನೀಡಿದ್ದಾರೆ. ರೈತರೊಬ್ಬರು ಆತ್ಮ ಹತ್ಯೆಗೆ ಶರಣಾದರೆ ಅದು ಚರ್ಚಾವಿಷಯವಾಗಬಾರದು, ಅಲ್ಲದೆ ಅವರ ವೈಯುಕ್ತಿಕ ಸಮಸ್ಯೆಗಳು ಇರುತ್ತವೆಂದು ಉತ್ತರಿಸಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಗುರಿಯನ್ನಾಗಿಸಿಕೊಂಡು ಈ ಮಾತನ್ನು ಹೇಳಿದ್ದಾರೆ. ಮಧ್ಯಪ್ರದೇಶದ ರೈತರ ಪ್ರತಿಭಟನೆಯಲ್ಲಿ ಆರು ಜನ ರೈತರು ಪೊಲೀಸ್ ಗುಂಡೇಟಿನಿಂದ ಸಾವನ್ನಪ್ಪಿದ್ದರು. ಘಟನೆಯ ಸ್ಥಳಕ್ಕೆ ರಾಜಕೀಯ ಮುಖಂಡರು ಮತ್ತು ಎಐಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಗಮನ ಸೆಳೆದಿದ್ದರು. ಇದೀಗ ಭೂಪೇಂದ್ರ  ಸಿಂಗ್ ಹೇಳಿಕೆ ರೈತರನ್ನು
ಮತ್ತಷ್ಟು ಕೆರಳುವಂತೆ ಮಾಡಿದೆ.     ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ