ಸಲ್ಮಾನ್ ಖಾನ್ ಜೊತೆ ಪ್ರಭಾಸ್ ಚಿತ್ರ?

Kannada News

14-06-2017

ಬಾಹುಬಲಿ ಚಿತ್ರದಿಂದಾಗಿ ವಿಶ್ವದೆಲ್ಲೆಡೆ ಮನೆ ಮಾತಾಗಿರೋ ನಟ ಪ್ರಭಾಸ್ ಬಾಲಿವುಡ್ ಗೆ ಸದ್ಯದಲ್ಲೇ ಎಂಟ್ರಿಯಾಗ್ತಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ಎಸ್.ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ ಒಂದು ಹಾಗೂ ಬಾಹುಬಲಿ -2 ದ ಕನ್ ಕ್ಲೂಶನ್ ಚಿತ್ರದಿಂದಾಗಿ ಇಡೀ ಜಗತ್ತಿನ ಅಭಿಮಾನಿಗಳ ಮನ ಗೆದ್ದಿರುವ ಪ್ರಭಾಸ್ ರನ್ನು ಬಾಲಿವುಡ್ ಗೆ ಪರಿಚಯಿಸೋಕೆ ನಿರ್ದೇಶಕರು, ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗ್ತಿದೆ.

ಅಂದಹಾಗೆ ಪ್ರಭಾಸ್ ಬಾಲಿವುಡ್ ನ ಬ್ಯಾಡ್ ಬಾಯ್, ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಅನ್ನೋದು ಸದ್ಯದ ಸುದ್ದಿ. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಪ್ರಭಾಸ್ ಅವರ ಬಾಲಿವುಡ್ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಅನ್ನಲಾಗ್ತಿದೆ.

ಇಷ್ಟಲ್ಲದೇ ನಿರ್ದೇಶಕ ಕರಣ್ ಜೋಹರ್ ಕೂಡ ಪ್ರಭಾಸ್ ಜೊತೆ ಚಿತ್ರ ಮಾಡೋದಕ್ಕೆ ಉತ್ಸುಕರಾಗಿದ್ದಾರಂತೆ. ಆದರೆ ಈ ಕುರಿತಂತೆ ಪ್ರಭಾಸ್ ಆಗಲಿ ಅಥವಾ ಕರಣ್ ಜೋಹರ್ ಆಗಲಿ ಯಾರೂ ಕೂಡ ಗುಟ್ಟು ಬಿಟ್ಟುಕೊಟ್ಟಿಲ್ಲ.

ಸದ್ಯ ಪ್ರಭಾಸ್ ಸಾಹೋ ಅನ್ನೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತೆಲಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿ ಅನುಷ್ಟಾ ಶೆಟ್ಟಿ ನಟಿಸುತ್ತಿದ್ದಾರೆ.

ಬಾಹುಬಲಿಯಿಂದಾಗಿ ಯಶಸ್ಸಿನ ಉತ್ತುಂಗಕ್ಕೇರಿರುವ ಪ್ರಭಾಸ್ ರನ್ನು ಬಾಲಿವುಡ್ ಗೆ ಕರೆತರೋಕೆ ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಪ್ರಭಾಸ್ ಯಾರಿಗೆ ಈ ಚಾನ್ಸ್ ನೀಡ್ತಾರೆ ಅನ್ನೋದು ಸದ್ಯದ ಕುತೂಹಲ. ಅಲ್ಲದೇ ನಟ ಸಲ್ಮಾನ್ ಖಾನ್ ಜೊತೆ ಪ್ರಭಾಸ್ ನಟಿಸಿದ್ರೆ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗೋದಂತೂ ಖಂಡಿತ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ