ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ ಬರಲಿರುವ ರಷ್ಯಾದ ವ್ಯಾಕ್ಸಿನ್

Russian Vaccine coming to market in September

31-07-2020

ಕೆಲವು ದಿನಗಳ ಹಿಂದೆ ರಷ್ಯಾ ದೇಶದಲ್ಲಿ ತಯಾರಾಗುತ್ತಿವ ಕೋವಿಡ್ ವ್ಯಾಕ್ಸಿನ್ ಬಗ್ಗೆ ಸೂಪರ್ ಸುದ್ದಿ ವರದಿ ಮಾಡಿತ್ತು. ಅನೇಕ ಓದುಗರು, ಸರಿ ಆದರೆ ಯಾವಾಗ ಜನಬಳಕೆಗೆ ಸಿದ್ಧವಾಗುತ್ತದೆ ಮತ್ತು ಯಾವಾಗ ಮಾರುಕಟ್ಟ್ಟೆಗೆ ಬರುತ್ತದೆ ಎಂದು ಕೇಳಿದ್ದರು. ಆ ನಿಟ್ಟಿನಲ್ಲಿ ಹೊಸ ಸುದ್ದಿಯೊಂದು ಹೊರಬಂದಿದೆ. ಮಾಸ್ಕೊದ ಗ್ಯಾಮಲೆಯ ಸಂಶೋಧನಾ ಕೇಂದ್ರ ಸಿದ್ಧ ಪಡಿಸಿದ ಈ ವ್ಯಾಕ್ಸಿನ್ ಆಗಸ್ಟ್ ತಿಂಗಳಿನಲ್ಲಿ ರಿಜಿಸ್ಟರ್ ಆಗಿ ಸೆಪ್ಟೆಂಬರ್ ತಿಂಗಳಲ್ಲಿ ಉತ್ಪಾದನೆಗೆ ಒಳಗಾಗಲಿದೆ ಎಂದು ವರದಿಯಾಗಿದೆ. ಮೂರನೇ ಹಂತದ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲೇ ಈ ವ್ಯಾಕ್ಸಿನ್ ಅನ್ನು ಉತ್ಪಾದನೆಗೆ ಸಜ್ಜಾಗಿಸಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ, ಆದರೂ ರಷ್ಯಾದ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದ ವಿಶ್ವದ ಪ್ರಥಮ ಕೋವಿಡ್ ವ್ಯಾಕ್ಸಿನ್ ಎಂಬ ಕೀರ್ತಿಗೆ ಪಾತ್ರವಾಗೋದು ಬಹುತೇಕ ಖಚಿತವಾಗಿದೆ.


ಸಂಬಂಧಿತ ಟ್ಯಾಗ್ಗಳು

#vaccine #covidvaccine #coronavaccine #coronavirus


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ