ಸುಧಾಕರ್ ಕಾಂಗ್ರೆಸ್ ಪರ?

Sudhakar in favour of Congress?

26-07-2020

ಕರ್ನಾಟಕ ರಾಜ್ಯ ಸರ್ಕಾರ ಮಾಡಿದೆ ಎನ್ನಲಾಗಿರುವ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಹಿರಂಗ ಹೇಳಿಕೆಗಳನ್ನು ನೀಡಿರುವುದು ಮಾತ್ರವಲ್ಲದೆ ಲೆಕ್ಕ ಸಮೇತ ಪತ್ರಿಕಾ ಘೋಷ್ಠಿಯಲ್ಲಿ ಆರೋಪ ಮಾಡಿರುವುದು ಆಳುವ ಮಂದಿಗೆ ಇರುಸುಮುರುಸು ಉಂಟುಮಾಡಿರುವುದು ಸಹಜ ಆದರೆ ಇದರ ಮಧ್ಯೆ ಸರ್ಕಾರದ ಭಾಗವಾಗಿರುವ ಒಬ್ಬ ವ್ಯಕ್ತಿ ಮಾತ್ರ ಸಂತಸ ಪಡುತ್ತಿರುವ ಬಗ್ಗೆ ಸೂಪರ್ ಸುದ್ದಿಗೆ ಮಾಹಿತಿ ಬಂದಿದೆ.
ಆರೋಗ್ಯ ಮಂತ್ರಿ ಶ್ರೀರಾಮುಲು ಅವರ ಪರಿಸ್ಥಿತಿ ದಿನೇದಿನೇ ಹಾಳಾಗುತ್ತಿದ್ದು ಅಕ್ರಮ ಮಾಡಿದ್ದೆಲ್ಲ ಶ್ರೀರಾಮುಲು ಮತ್ತು ಅವರ ಸಂಗಡಿಗರೇ ಎಂಬಂತೆ ಬಿಂಬಿಸಲಾಗುತ್ತಿರುವ ಸಮಯದಲ್ಲಿ ತಾನೇನು ಸಾಚಾ ಅಲ್ಲದಿದ್ದರೂ ಕೋವಿಡ್ ಅಂಥ ದುರಂತದ ಸಮಯದಲ್ಲಂತೂ ಈ ಮಟ್ಟದ ಭ್ರಷ್ಟಾಚಾರ ಮಾಡಲಿಕ್ಕೆ ಹೋಗಿಲ್ಲ, ಹೋಗುವುದೂ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಮಂತ್ರಿ ಡಾ ಸುಧಾಕರ್ ಅವರು ಕೆಲವು ಜನರ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಬಂದಿದೆ.
ಈ ಕೋವಿಡ್ ಸಮಯದಲ್ಲಿ ಪರಿಹಾರದ ಹೆಸರಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಮಾತನಾಡಿರುವ ಸುಧಾಕರ್ ಅದರಲ್ಲಿ ತಮ್ಮ ಪಾತ್ರವಿಲ್ಲ ಮತ್ತು ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ ಎಂದೂ ವರದಿಯಾಗಿದೆ. ಸುಧಾಕರ್ ಅವರ ಬಗ್ಗೆಯೂ ಭ್ರಷ್ಟಾಚಾರದ ಆರೋಪವಿದ್ದರೂ ಅವರು ದೊಡ್ಡ ಅಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗಿತ್ತು ಆದರೆ ಈ ವರದಿಯ ಪ್ರಕಾರ ಡಾ ಸುಧಾಕರ್ ಅವರು ತಮ್ಮ ಸರ್ಕಾರದಲ್ಲೇ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಇರುವಂತೆ ಮತ್ತು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆರೋಪಗಳ ಪರ ಇರುವಂತೆ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಶ್ರೀರಾಮುಲು ವಿರುದ್ಧ ಇನ್ನೆಷ್ಟು ಮಂದಿ ಕತ್ತಿ ಮಸೆಯಬಹುದು ಎಂದು ಕಾದು ನೋಡಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

#sudhakar #congress #covid #karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ