Covidನಿಂದ ಗುಣವಾದರೂ safe ಅಲ್ಲ!

Covid is good but not safe

19-07-2020

ಭಾರತದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಇನ್ನೆರಡು ವಾರಗಳಲ್ಲಿ 15 ಲಕ್ಷ ದಾಟುವ ಸಾಧ್ಯತೆ ಸ್ಪಷ್ಟವಾಗುತ್ತಿದೆ. ಆದರೆ ಭಾರತ ಸಾವಿನ ಸಂಖ್ಯೆಯನ್ನು ಬಹಳಷ್ಟು ನಿಯಂತ್ರಿಸಿರುವ ಬಗ್ಗೆ ಹೆಮ್ಮೆಯಿಂದ ವಿಶ್ವಕ್ಕೇ ಹೇಳಿಕೊಳ್ಳುತ್ತಿದೆ. ಪ್ರಧಾನಿ ಕೋವಿಡ್ ನಿರ್ವಹಣೆಯ ಬಗ್ಗೆ ಬೀಗುತ್ತಿದ್ದರೆ, ಕರ್ನಾಟಕದಲ್ಲಿ ಆರೋಗ್ಯ ಮಂತ್ರಿ ದೇವರ ಮೇಲೆ ಭಾರ ಹಾಕಲು ಸಜ್ಜಾಗಿದ್ದಾರೆ. ಭಾರತದಲ್ಲಿ ಗುಣಮುಖರಾಗಿರುವವರ ಸಂಖ್ಯೆ ಹೆಚ್ಚಿರುವುದರಿಂದ ಅಷ್ಟೊಂದು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಲಾಗುತ್ತಿದೆ. 

 

ಇಂಥಾ ಭಯಂಕರ ವೈರಲ್ ಕಾಯಿಲೆ ಒಬ್ಬ ವ್ಯಕ್ತಿಗೆ ಬಂದು ಆತ ಗುಣಮುಖನಾದರೆ ಆತನ ದೇಹದಲ್ಲಿ ಆ ರೋಗಕ್ಕೆ ಪ್ರತಿರೋಧಕ ಶಕ್ತಿ ಹೆಚ್ಚಾಗಿ ಇನ್ನೊಮ್ಮೆ ಅದೇ ಸೋಂಕಿನಿಂದ ಆ ವ್ಯಕ್ತಿ ಬಳಲುವ ಸಾಧ್ಯತೆ ಇಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಆದರೆ ಇತ್ತೀಚಿಗೆ ಹೊರಬಂದಿರುವ ಮಾಹಿತಿಯ ಪ್ರಕಾರ ಸೋಂಕಿನಿಂದ ಬಳಲಿದ ವ್ಯಕ್ತಿ ಗುಣಮುಖನಾದರೆ ಆತನ ದೇಹದಲ್ಲಿ ಉತ್ಪತ್ತಿಯಾದ ರೋಗನಿರೋಧಕ ಶಕ್ತಿ ಕೆಲವೇ ಸಮಯದಲ್ಲಿ ಕುಗ್ಗಿ ಆತ ಮತ್ತೊಮ್ಮೆ ಕೋವಿಡ್ ಸೋಂಕಿಗೆ ಬಲಿಯಾಗುವ ಸಾಧ್ಯತೆ ಇದೆ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ. 

 

ಅನೇಕ ಸಂಶೋಧನೆಗಳಲ್ಲಿ ಹೊರಬಂದಿರುವ ಮಾಹಿತಿಯ ಪ್ರಕಾರ ಕೋವಿಡ್ ಕಾಯಿಲೆ ಬಂದು ಗುಣಮುಖರಾದರೆ ಇನ್ನೊಮ್ಮೆ ಅದೇ ಕಾಯಿಲೆ ಬರುವುದಿಲ್ಲ ಎನ್ನುವ ಖಾತ್ರಿಯಿಲ್ಲ ಎಂದು ಹೇಳಲಾಗಿದೆ. ಸಾಮಾನ್ಯ ನೆಗಡಿಗೆ ಹತ್ತಿರುವಿರುವ ಈ ವೈರಸ್ ನೆಗಡಿಯಂತೆ ಪುನಃ ಪುನಃ ಬರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದ್ದರಿಂದಲೇ ವಿಶ್ವ ಆರೋಗ್ಯ ಸಂಸ್ಥೆಯವರು ಈ ಕಾಯಿಲೆಯನ್ನು ಅಷ್ಟೊಂದು ನಿರ್ಲಕ್ಷಿಸಬೇಡಿ ಎಂದು ಪದೇ ಪದೇ ಹೇಳುವಂತಾಗಿದೆ ಮತ್ತು ಕೋವಿಡ್ನಿಂದ ಗುಣ ಹೊಂದಿದವರೂ ಮತ್ತೆ ಈ ಸೋಂಕು ತಟ್ಟದಂತೆ ನೋಡಿಕೊಳ್ಳುವುದೂ ಅಷ್ಟೇ ಪ್ರಮುಖ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

covid Covid's disease disease Health Organization


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ