ಕೊರೋನಾ ಬಗ್ಗೆ ಸತ್ಯಕ್ಕಿಂತ ಸುಳ್ಳೇ ಜಾಸ್ತಿ

More lies than truth about Corona

03-07-2020

ಕೊರೋನಾ ಮಹಾಮಾರಿಯ ಬಗ್ಗೆ ಜನರಿಗೆ ಭಯವಿರುವುದು ಸಹಜ. ಈಗಾಗಲೇ ವಿಶ್ವದಾದ್ಯಂತ ಒಂದು ಕೋಟಿ ಹತ್ತು ಲಕ್ಷಕ್ಕೂ ಮಿಗಿಲಾಗಿ ಸೋಂಕಿತರಿದ್ದಾರೆ. ಈ ಕಾರಣದಿಂದಾಗಿ ಪ್ರತಿಯೊಬ್ಬರಿಗೂ ತಮಗೂ ಈ ಕಾಯಿಲೆ ಬರಬಹುದು ಎಂಬ ಭಯ ಇದೆ. ಆದರೆ ನಿಜವಾಗಿಯೂ ಕೊರೋನಾ ಕಾಯಿಲೆಯ ಬಗ್ಗೆ ಭಯ ಪಡಬೇಕಾದ ಅವಶ್ಯಕತೆ ಇದೆಯಾ? ಎಂದು ಕೇಳಬೇಕಾಗಿದೆ. ಅತ್ಯಂತ ಸಮಾಧಾನಕರ ಸಂಗತಿಯೆಂದರೆ ಈ ಸೋಂಕು ಅಂಟಿದೆಯೆಂದರೆ ಅದು ಸಾವಿನಲ್ಲೆ ಅಂತ್ಯವಾಗುತ್ತದೆ ಎಂದೇನೂ ಇಲ್ಲ. ಇದು ಮಾರಣಾಂತಿಕ ಕಾಯಿಲೆಯಲ್ಲ. ವಿಶ್ವದಲ್ಲಿ ಅನೇಕ ಯೌವನಿಗರು ಮತ್ತು ಮಧ್ಯವಯಸ್ಕರು ಸತ್ತಿರುವುದು ಸತ್ಯವಾದರೂ ಈ ಕಾಯಿಲೆ ಹೆಚ್ಚಾಗಿ ಬಾಧಿಸುವುದು ರೋಗಪ್ರತಿರೋಧಕ ಶಕ್ತಿ ಕಡಿಮೆ ಇರುವವರನ್ನು ಮಾತ್ರ, ಎಂದರೆ ಚಿಕ್ಕ ಮಕ್ಕಳನ್ನು ಮತ್ತು ವೃದ್ಧರನ್ನು. ಸೋಂಕು ತಗುಲಿದವರೆಲ್ಲ ಕಾಯಿಲೆಯಿಂದ ಪೀಡಿತರಾಗುವುದೂ ಇಲ್ಲ. ಅನೇಕ ಮಂದಿಯಲ್ಲಿ ಸೋಂಕು ಇದ್ದರೂ ಅವರು ಆರಾಮಾಗೇ ಓಡಾಡುತ್ತಿರುತ್ತಾರೆ. ಅವರಲ್ಲಿ ರೋಗದ ಯಾವ ಲಕ್ಷಣವೂ ಕಂಡುಬರುವುದಿಲ್ಲ. ಹಾಗೇ ಕೆಲವರಲ್ಲಿ ಕಾಯಿಲೆ ಉಂಟಾದರೂ ಲಕ್ಷಣಗಳು ಬಹಳ ಕಡಿಮೆ ಇರಬಹುದು. ಮತ್ತು ಸೋಂಕು ಇದ್ದವರೆಲ್ಲ ಬೇರೆಯವರಿಗೆ ಹರಡುತ್ತಾರೆ ಎಂದೂ ಇಲ್ಲ. ಏಕೆಂದರೆ ಸೋಂಕಿತನ ಎಂಜಲು ಮತ್ತು ಸಿಂಬಳದಲ್ಲಿ ವೈರಸ್ ನ ಸಾಂದ್ರತೆ ಎಷ್ಟು ಎಂದರೆ ವೈರಸ್ ನ ಸಂಖ್ಯೆ ಎಷ್ಟು ಎನ್ನುವುದರ ಆಧಾರದ ಮೇಲೆ ಅದು ನಿರ್ಧರಿತವಾಗುತ್ತದೆ. ಮತ್ತು ಧೈರ್ಯ ನೀಡುವ ವಿಚಾರವೇನೆಂದರೆ ಸೋಂಕಿತರ ಪೈಕಿ ಭಾರತದಲ್ಲಂತೂ ಬಹಳ ಕಡಿಮೆ ಮಂದಿ ಸಾಯುತ್ತಿದ್ದಾರೆ. ಸಾಯುವವರು ಬಹಳ ಮಂದಿ ಬೇರೆ ಕಾಯಿಲೆ ಇರುವವರೂ ಆಗಿರುತ್ತಾರೆ. ಎಂದರೆ ಅವರು ಕೊರೋನಾದಿಂದ ಸಾಯುವುದು ಹೃದಯದ ತೊಂದರೆ ಉಸಿರಾಟದ ತೊಂದರೆ, ಡಯಾಬಿಟಿಸ್ ಮತ್ತು ಕಿಡ್ನಿ ಸಮಸ್ಯೆಗಳು ಮೊದಲೇ ಇದ್ದ ಸಂದರ್ಭದಲ್ಲಿ. ಹಾಗಿದ್ದೂ ಅನೇಕ ಅಂಥ ಜನ ಕೂಡ ಸಾಯುವುದಿಲ್ಲ. ಸರಿಯಾಗಿ ಚಿಕಿತ್ಸೆ ಸಿಕ್ಕರೆ ಬಹಳಷ್ಟು ಮಂದಿ ಬದುಕುಳಿಯುತ್ತಾರೆ. ಭಾರತಲ್ಲಿ ಈಗಿರುವ ಸಾವಿನ ಪ್ರಮಾಣ ಶೇಖಡ ಮೂರು ಮಾತ್ರ, ಎಂದರೆ ನೂರು ಜನ ಸೋಂಕಿನಿಂದ ಬಳಲುತ್ತಿದ್ದರೆ ಅವರ ಪೈಕಿ ಬರಿ ಮೂರು ಜನ ಮಾತ್ರ ಸಾಯುತ್ತಾರೆ. ಅದೂ ಮುಂದಿನ ದಿನಗಳಲ್ಲಿ ಕಡಿಮೆಯಾಗಬಹುದು. ಆದ್ದರಿಂದ ಕೊರೋನಾ ಒಂದು ಸಾವಿನ ಕಾಯಿಲೆ ಎಂಬ ಭಯವನ್ನು ತ್ಯಜಿಸಿ ಮಾಸ್ಕ್ ಧರಿಸಿ ಸೋಂಕು ತಗಲದಂತೆ ನೋಡಿಕೊಂಡು ನಿಮ್ಮ ನಿತ್ಯ ಜೀವನವನ್ನು ನಡೆಸಿರಿ. ನಿಮಗೆ ಸೋಂಕು ತಗುಲಿದರೆ ನೀವು ಬದುಕಿಬಿಡಬಹುದು ಆದರೆ ನೀವು ಸೋಂಕು ಹರಡಿ ಇನ್ನೊಬ್ಬರು ನಿಮ್ಮಿಂದಾಗಿ ಸಾಯುವುದು ಬೇಡ. ಅದೇ ಈ ಹೊತ್ತಿನ ಸಂದೇಶ.


ಸಂಬಂಧಿತ ಟ್ಯಾಗ್ಗಳು

#corona #covid19 #covidbangalore #covidwarriors


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ