ಜುಲೈ ಎರಡರ ಕಾರ್ಯಕ್ರಮಕ್ಕೆ ಸಜ್ಜಾಗಿರುವ ಕಾಂಗ್ರೆಸ್ ಪಕ್ಷ

Congress Party is ready for July 2nd Program

30-06-2020

ಕೋವಿಡ್ ಲಾಕ್ ಡೌನ್ ಮುಂತಾದ ಕಾರಣಗಳಿಂದಾಗಿ  ಅಧಿಕೃತವಾಗಿ ಅಧ್ಯಕ್ಷ ಪದವಿಯ ಜವಾಬ್ದಾರಾಯಿಯನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಬಹಿರಂಗ ಸಭೆಯ ಬದಲಾಗಿ ಆನ್ಲೈನ್ ಸಭೆಯ ಮೂಲಕ ಅಧಿಕಾರ ಸ್ವೀಕಾರ ಸಮಾರಂಭ ನಡೆಸಲು ಡಿಕೆ ಶಿವಕುಮಾರ್ ನಿಶ್ಚಯಿಸಿದರು ಆದರೆ ವಿವಿಧ ಕಾರಣಗಳಿಂದಾಗಿ ಅದು ಕೂಡ ಮುಂದೂಡಲ್ಪಡುತ್ತಾ ಹೋಗಿ ಈಗ ಜೂಲೈ 2ರಂದು ಆ ಕಾರ್ಯಕ್ರಮ ನಡೆಯಲಿದೆ. ಜುಲೈ ಎರಡರ ಕಾರ್ಯಕ್ರಮ ಅನನ್,ಯ ಅಪ್ರತಿಮ ಮತ್ತು ಅದ್ಭುತವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಡಿ ಕೆ ಶಿವಕುಮಾರ್ ಅವರು  ಕೆಪಿಸಿಸಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಪಕ್ಷದ ಪ್ರತಿಜ್ಞೆ ಓದುತ್ತಿರುವಾಗಲೇ ಅದೇ ಸಮಯದಲ್ಲಿ ಸುಮಾರು 7800 ಮುನಿಸಿಪಲ್ ವಾರ್ಡ್ ಮತ್ತು ಪಂಚಾಯ್ತಿಗಳಲ್ಲಿ ಪಕ್ಷದ ಕಾರ್ಯಕರ್ತರು ಸಭೆ ಸೇರಿ ಅದೇ ಸಮಯದಲ್ಲಿ ಜೋಮ ಆನ್ಲೈನ್ ವೀಕ್ಷಿಸಿ ಶಿವಕುಮಾರ್ ಅವರೊಂದಿಗೆ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆಯನ್ನು ಪಠಿಸಿ ನೂತನ ಅಧ್ಯಕ್ಷರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಮಗ್ಗುಲದಲ್ಲೇ ಇರುವ ಹೊಸ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬರಿ ನೂರೈವತ್ತು ಮಂದಿ ಪ್ರತಿಷ್ಠಿತರು ಮಾತ್ರ ಭಾಗವಹಿಸಲಿದ್ದಾರೆ ಮತ್ತು ಉಳಿದವರು ತಮ್ಮ ತಮ್ಮ ವಾರ್ಡ್ ಅಥವ ಪಂಚಾಯ್ತಿಯಿಂದಲೇ ನೋಡಬೇಕು ಎಂದು ಸೂಚಿಸಲಾಗಿದೆ. ಬೆಂಗಳೂರಿನ ಸಭೆಯಲ್ಲಿ ಸುಮಾರು ನೂರು ಅಡಿಯ LED ವಾಲ್ ಅನ್ನು ನಿರ್ಮಿಸಲಾಗಿದ್ದು ಅದರಲ್ಲಿ ನೂರಾರು ಪಂಚಾಯ್ತಿಗಳಲ್ಲಿ ನಡೆಯುವ ಸಭೆಗಳನ್ನು ಏಕ ಕಾಲದಲ್ಲಿ ತೋರಿಸಲಾಗುತ್ತದೆ. ನೂತನ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತು ಪಕ್ಷದ ಹಿರಿಯ ನಾಯಕ ಬಿ ಎಲ್ ಶಂಕರ್ ಅವರುಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಉದ್ಘಾಟನಾ ದೀಪ ಹಚ್ಚುವ ವೇಳೆ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಸಾಧು ಕೋಕಿಲ ಅವರು ಗೀತೆ ಹಾಡಲಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಎಲ್ಲಾ ನ್ಯೂಸ್ ಚಾನಲ್ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮ ದಾಖಲೆ ನಿರ್ಮಿಸಲಿದ್ದು ಇಂಥಾ ಒಂದು ಪ್ರಯತ್ನ ವಿಶ್ವದಲ್ಲೇ  ಪ್ರಥಮ ಬಾರಿಗೆ ನಡೆಯುತ್ತಿದೆ ಎಂದೂ ಹೇಳಲಾಗುತ್ತಿದೆ. ಈ ದಾಖಲೆಯ ಕಾರ್ಯಕ್ರಮ ಹೇಗೆ ಮೂಡಿ ಬರಬಹುದು ಎಂದು ಡಿಕೆಯವರ ಅಭಿಮಾನಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#kpcc #dkshivakumar #oath #karnatakacongress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Jai congress jai jai congress
  • Venkatesh Ingalagi bhovi Kushtagi
  • Social worker
ಡಿಕೆಸಿಗೆಆನಬಲಬತು
  • Satish Banakar
  • bajansa
Super sir nimma adbutavada sinmhasana heruvudonde Channa
  • Shankara K N
  • Billcallecter