ಕನ್ನಡದ 'ಲಾ' ಸಿನಿಮಾ ಅಮೆಜಾನ್ ಫ್ರೈಮ್ ನಲ್ಲಿ



26-06-2020

ಕನ್ನಡದ ಬಹುನಿರೀಕ್ಷಿತ ‘ಲಾ’ ಸಿನಿಮಾವು ಜುಲೈ 17ರಂದು ಪ್ರದರ್ಶನಗೊಳ್ಳಲಿದೆ ಎಂದು ಅಮೆಜಾನ್ ಫ್ರೈಮ್ ವಿಡಿಯೋ ತಿಳಿಸಿದೆ. ಇದೊಂದು ಕ್ರೈo ಥಿಲ್ಲರ್ ಆಧರಿಸಿದ ಸಿನಿಮಾವಾಗಿದ್ದು ನಂದಿನಿ ಪಾತ್ರಧಾರಿಯಾಗಿ ರಾಗಿಣಿ ಚಂದ್ರನ್ ಅಭಿನಯಿಸಿದ್ದಾರೆ. ನ್ಯಾಯಕ್ಕಾಗಿ ಅಪರಾಧದ ವಿರುದ್ಧ ಹೋರಾಡುವ ಕತೆ ಇದಾಗಿದ್ದು, ಈ ಚಿತ್ರವು ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ಧ ಧ್ವನಿ ಎತ್ತುತ್ತದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಎಂ ಗೋವಿಂದ ನಿರ್ಮಾಣದ ‘ಲಾ’  ಸಿನಿಮಾವನ್ನು ರಘು ಸಮರ್ಥ ಅವರು ನಿರ್ದೇಶಿಸಿದ್ದಾರೆ. ರಾಗಿಣಿ ಪ್ರಜ್ವಲ್ ಅವರು ಈ ಸಿನಿಮಾದ ಮೂಲಕ ಪ್ರಮುಖ ನಟಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ , ಸಿರಿ ಪ್ರಹ್ಲಾದ್ ಮತ್ತಿತರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಲಾ’ ಸಿನಿಮಾವು ಸ್ಯಾಂಡಲ್ ವುಡ್  ಇಂಡಸ್ಟ್ರಿಯಿಂದ ಬಿಡುಗಡೆಯಾಗಲಿರುವ ಮೊದಲ ಡಿಜಿಟಲ್ ಚಿತ್ರವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡೆಕ್ಷನ್ ರಚಿಸಿದ ಈ ಚಿತ್ರವು ಜುಲೈ 17,2020ರಂದು ಅಮೆಜಾನ್ ಫ್ರೈಂ ವಿಡಿಯೋದಲ್ಲಿ ವಿಶ್ವದಾದ್ಯಂತ 200ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ರ್ಯದಲ್ಲಿ ಬಿಡುಗಡೆಯಾಗಲಿದೆ.


ಸಂಬಂಧಿತ ಟ್ಯಾಗ್ಗಳು

#lawKannada #amazonprimekannada #puneethrajkumar #raghusamarth


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ