ಯಡಿಯೂರಪ್ಪ ಅವರ ಮುಂದಿನ ಯೋಜನೆ ಏನು ಗೊತ್ತಾ?

Do you know Yediyurappa

17-06-2020

ಬಿಜೆಪಿಯೊಂದಿಗೆ ಮತ್ತೊಮ್ಮೆ ಮುನಿಸಿಕೊಂಡರೆ ಯಡಿಯೂರಪ್ಪ ಹೊಸಪಕ್ಷ ಕಟ್ಟುತ್ತಾರಾ ಎನ್ನುವ ಪ್ರಶ್ನೆಗೆ ಹೌದು ಎನ್ನುತ್ತವೆ ಬಲ್ಲಮೂಲಗಳು. ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಸಹವಾಸ ಸಾಕಾಗಿಹೋಗಿಬಿಟ್ಟಿದೆ ಮತ್ತು ಯಡಿಯೂರಪ್ಪ ಅವರ ಸರ್ಕಾರ ಅವರ ಕುಟುಂಬದ ಖಾಸಗಿ ವ್ಯವಹಾರದಂತೆ ಅವರ ಮಗನ ಕೈಯಲ್ಲೇ ಸುಭದ್ರವಾಗಿರುವುದು ಪಕ್ಷದ ನಾಯಕರಿಗೆ ನುಂಗಲಾಗದಿರುವ ತುತ್ತಾಗಿರುವುದು ಮುಂದೊಂದು ದಿನ ಬೇಗನೇ ಯಡಿಯೂರಪ್ಪ ಅವರಿಗೆ ಗೇಟ್ ಪಾಸ್ ಕೊಡುವ ತಯಾರಿಗೆ ಕಾರಣವಾಗಿರುವಂತೆ ಕಂಡುಬರುತ್ತಿದೆ. ಅಂಥಾ ಪರಿಸ್ಥಿತಿ ಎದುರಾಗುವ ಮೊದಲೇ ತಾವೊಂದು ಪರ್ಯಾಯ ಮಾಡಿಕೊಳ್ಳುವುದು ಒಳ್ಳೆಯದು ಎಂಬ ಜ್ಞಾನೋದಯ ಉಂಟಾಗಿ ಯಡಿಯೂರಪ್ಪ ಅವರು ತಮ್ಮ ಮಗ ವಿಜಯೇಂದ್ರ ಅವರಿಗೆ ಒಂದು ಮಾರ್ಗ ಸೂಚಿಯನ್ನು ನೀಡಿದ್ದಾರೆ ಮತ್ತು ಅದು ಕಾರ್ಯ ರೂಪಕ್ಕೆ ಬಂದರೆ ಆ ಯೋಜನೆ ಒಂದು ಸಾಮಾಜಿಕ ಸಂಘಟನೆಯ ರೀತಿ ಆರಂಭವಾಗಿ ಆನಂತರ ಒಂದು ಪಕ್ಷವಾಗಿ ಪರಿವರ್ತಿತವಾಗುತ್ತದೆ ಎಂದೂ ಹೇಳಲಾಗುತ್ತಿದೆ. ಇಳಿವಯಸ್ಸಿನ ಯಡಿಯೂರಪ್ಪ ಅವರು ಈಗಾಗಲೇ ಬಹಳಷ್ಟು ಅನುಭವಿಸಿಯಾಗಿದೆ ಆದರೆ ಇನ್ನೊಂದು ದೊಡ್ಡ ಹೋರಾಟಕ್ಕೆ ಅವರು ಸಿದ್ಧರಿದ್ದಂತಿಲ್ಲ, ಅಂಥ ಹೋರಾಟವೇನಾದರು ನಡೆದರೆ ಅದು ತಮ್ಮ ಮಗನಿಗೆ ಒಂದು ಸ್ಥಾನದ ಭದ್ರತೆ ಮತ್ತು ಪಟ್ಟ ಕಟ್ಟುವ ಕಾರ್ಯಕ್ಕಾಗಿ ಮಾತ್ರ ಎಂದು ಈ ಎಲ್ಲ ಮಾಹಿತಿಗೆ ಮೂಲರಾದವರು ಸುದ್ದಿ ಹರಡಿಸುತ್ತಿದ್ದಾರೆ. ಏನಿದ್ದರೂ ಯಡಿಯೂರಪ್ಪ ಅವರು ಬಿಜೆಪಿಯಿಂದ ಅವಮಾನಿತರಾಗಿ ಹೊರಬರುವುದು ಮಾತ್ರ ಯಾರಿಗೂ ಬೇಡದ ವಿಚಾರ ಎಂದೂ ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

#yediyurappa #bjpkarnataka #karnataka #vijayendra


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ