ಶಿವದರ್ಶನ ಪಡೆದ ಮೋದಿ ಪತ್ನಿ

Jasoda Ben visits Shiva Temple

04-03-2020

ಚಿತ್ರದುರ್ಗ, ಮಾ.4: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್‍ ಅವರು ಇಲ್ಲಿನ ನೀಲಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ-ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸುದ್ದಿ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಹಮ್ಮಿಕೊಂಡಿರುವ ‘ಶ್ರೀಕೃಷ್ಣಾರ್ಪಣಂ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಬೆಂಗಳೂರಿನಿಂದ ತೆರಳುವಾಗ, ಮಾರ್ಗಮಧ್ಯದಲ್ಲಿ ಅವರು ಚಿತ್ರದುರ್ಗದಲ್ಲಿ ಕೊಂಚ ಹೊತ್ತು ವಿರಮಿಸಬೇಕಾಗಿ ಬಂತು. ಆ ಸಂದರ್ಭದಲ್ಲಿ ಅವರು ಕಾಲಾವಕಾಶ ಮಾಡಿಕೊಂಡು ದೇವರ ದರ್ಶನ ಪಡೆದು ಸುಮಾರು 20 ನಿಮಿಷ ದೇಗುಲದಲ್ಲೇ ಇದ್ದರು ಹಾಗೂ ತರುವಾಯದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಉಪಾಹಾರ ಸೇವಿಸಿದರು ಎನ್ನಲಾಗಿದೆ.

ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದ ಜಶೋದಾ ಅವರು ಬುಧವಾರ ಮುಂಜಾನೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಸ್ವಾಮೀಜಿಯವರು ಮಠದಲ್ಲಿ ಇಲ್ಲದ ಕಾರಣ ಚಿತ್ರದುರ್ಗಕ್ಕೆ ಪಯಣ ಮುಂದುವರಿಸಿದರು. ರಾಮಚಂದ್ರಾಪುರ ಮಠದಲ್ಲಿನ ಕಾರ್ಯಕ್ರಮದ ನಂತರ ಜಶೋದಾ ಅವರು ಶೃಂಗೇರಿಗೆ ತೆರಳಲಿದ್ದಾರೆಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Jasoda Ben Neelakantheshwara Temple Chitradurga Sri Krishnarpanam


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ