ಕೊರೋನಾ ಭಯ: ಚಿತ್ರೀಕರಣ ರದ್ದು

Yuvaratna shooting cancelled

04-03-2020

ಬೆಂಗಳೂರು, ಮಾ.4: ಚೀನಾದಲ್ಲಿ ಹುಟ್ಟಿ ಎಲ್ಲೆಡೆ ವ್ಯಾಪಿಸುತ್ತಿರುವ ಕೊರೋನಾ ವೈರಸ್‍ ತಂದಿಟ್ಟಿರುವ ಸಂಕಷ್ಟಗಳು ಒಂದೆರಡಲ್ಲ. ವಿಶ್ವದ ವಿವಿಧೆಡೆ ಸಾವಿರಾರು ಸಾವಿಗೆ-ಸೋಂಕಿಗೆ ಕಾರಣವಾಗಿರುವ ಈ ಮಾರಕರೋಗ ಕನ್ನಡ ಚಿತ್ರರಂಗದ ಪಾಲಿಗೂ ಮಾರಿಯಾಗಿ ಪರಿಣಮಿಸಿದೆ.

ದರ್ಶನ್‍ ಅಭಿನಯದ ‘ರಾಬರ್ಟ್‍’ ಚಿತ್ರದ ಗೀತೆಯೊಂದರ ಚಿತ್ರೀಕರಣ ಸ್ಪೇನ್‍ನಲ್ಲಿ ನಡೆಯಬೇಕಿದ್ದುದು, ಕೊರೋನಾ ವೈರಸ್‍ ಕಾರಣದಿಂದಾಗಿ ರದ್ದಾಗಿದ್ದನ್ನು ಈಗಾಗಲೇ ಓದಿದ್ದೀರಿ. ಅದೇ ಸಾಲಿಗೆ ಮತ್ತೊಂದು ಪ್ರಕರಣವೂ ಸೇರುತ್ತಿದೆ.

ಪವರ್‍ ಸ್ಟಾರ್‍ ಪುನೀತ್‍ ರಾಜ್‍ ಕುಮಾರ್‍ ನಟನೆಯ ‘ಯುವರತ್ನ’ ಚಿತ್ರದ ಚಿತ್ರೀಕರಣವನ್ನು ಮಾರ್ಚ್‍ 3ರಿಂದ 7ರವರೆಗೆ ವಿದೇಶದಲ್ಲಿ ಕೈಗೊಳ್ಳಲು ಹಿಂದೆಯೇ ಯೋಜಿಸಲಾಗಿತ್ತು. ಜತೆಗೆ ಸ್ಲೋವೇನಿಯಾದಲ್ಲಿ ಹೋಟೆಲ್‍ ಕೋಣೆಗಳನ್ನೂ ಕಾದಿರಿಸಲಾಗಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಚಿತ್ರತಂಡ ಹಿಂದಡಿ ಇಡುವಂತಾಗಿದೆ.

ಯಶ್‍ ಅಭಿನಯದ ‘ಮಿಸ್ಟರ್‍ ಅಂಡ್ ಮಿಸೆಸ್‍ ರಾಮಾಚಾರಿ', ಪುನೀತ್‍ ಅಭಿನಯದ ‘ರಾಜಕುಮಾರ’ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್‍ ಆನಂದ್‍ ರಾಮ್‍ ಅವರೇ ‘ಯುವರತ್ನ’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಯೇಶಾ ಸೈಗಲ್‍ ನಾಯಕಿಯಾಗಿ ನಟಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Puneet Rajkumar Power Star Yuvaratna Santosh Anandram


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ