ಯುನಾನಿ-ಆಯುಷ್ ಪದ್ಧತಿಯಿಂದ ದೇಶಕ್ಕೆ ಒಳಿತು

Unani and Ayush systems are good for country

03-03-2020

ಬೆಂಗಳೂರು, ಮಾ.3: ಯುನಾನಿ ಹಾಗೂ ಆಯುಷ್ ರೀತಿಯ ಪಾರಂಪರಿಕ ವೈದ್ಯ ಪದ್ಧತಿಗಳ ಬಗ್ಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಡಾ. ಎಂ.ಎ. ವಹೀದ್ ಪ್ರತಿಪಾದಿಸಿದ್ದಾರೆ.

ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ, ಹಕೀಂ ಅಜ್ಮಲ್ ಖಾನ್ ಅವರ 152ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ, ಯುನಾನಿ ದಿನಾಚರಣೆ-2020 ಮತ್ತು ‘ಉತ್ತಮ ಆರೋಗ್ಯ-ಯೋಗಕ್ಷೇಮಕ್ಕಾಗಿ ಯುನಾನಿ’ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಯುನಾನಿ ಹಾಗೂ ಆಯುಷ್ ಪದ್ಧತಿ ಅಳವಡಿಸಿಕೊಂಡರೆ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ವೈದ್ಯ ಕ್ಷೇತ್ರದಲ್ಲಿ ಅಪಾರ ಮನ್ನಣೆ ಗಳಿಸಿದ್ದ ಅಜ್ಮಲ್ ಖಾನ್, ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಹಿಂದೂ- ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ ಉಜ್ವಲ ರಾಷ್ಟ್ರಭಕ್ತರಾಗಿಯೂ ನಾಡಿನ ಸೇವೆ ಮಾಡಿದ ಪ್ರಮುಖರು ಎಂದು ಅವರು ಸ್ಮರಿಸಿದರು.

ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಮಾತನಾಡಿ, ಹಲವು ವರ್ಷಗಳ ಹಿಂದೆ ಆಯುರ್ವೇದ ಅಸ್ತಿತ್ವದಲ್ಲಿ ಇತ್ತಾದರೂ ಬ್ರಿಟಿಷ್ ವೈದ್ಯ ಪದ್ಧತಿ ಆರಂಭವಾದ ನಂತರದಲ್ಲಿ ಆಯುರ್ವೇದಕ್ಕೆ ಇದ್ದ ಜನಪ್ರಿಯತೆ ಕೊಂಚ ಕಡಿಮೆಯಾಯಿತು. ಆದರೆ, ಈ ಸಂದರ್ಭ ಯುನಾನಿ ವೈದ್ಯ ಪದ್ಧತಿ ಬಗ್ಗೆ ಹಕೀಂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಪ್ರಯತ್ನಿಸಿದರು ಎಂದರು.


ಸಂಬಂಧಿತ ಟ್ಯಾಗ್ಗಳು

Unani Hakeem Azmal Khan Ayush M.A. Waheed


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ