ಪಾತಕಿ ಪೂಜಾರಿ ವಶಕ್ಕಾಗಿ ಪೈಪೋಟಿ!

Competition among police to take pujari into custody

03-03-2020

ಬೆಂಗಳೂರು, ಮಾ.3: ನಗರದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಮಹಾರಾಷ್ಟ್ರ, ಗುಜರಾತ್, ಕೇರಳ ಸೇರಿ ಇತರ ರಾಜ್ಯಗಳ ತನಿಖಾ ತಂಡಗಳು ಪೈಪೋಟಿಗಿಳಿದಿವೆ ಎಂದು ತಿಳಿದುಬಂದಿದೆ.

ಸಿಸಿಬಿ ಪೊಲೀಸರ ನಂತರ ಮಂಗಳೂರು ಪೊಲೀಸರ ತನಿಖೆ ಮುಗಿಯುತ್ತಿದ್ದಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಪೂಜಾರಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಈಗ ಮುಂಬೈ ಪೊಲೀಸರಿಗೂ ಮೊದಲೇ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ರವಿ ಪೂಜಾರಿ 2018ರಲ್ಲಿ ಮಲಯಾಳಂ ನಟಿಯೊಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಕೇರಳದಲ್ಲಿ ಪ್ರಕರಣ ದಾಖಲಾಗಿದೆ. ಪೂಜಾರಿ ಪೊಲೀಸ್ ಕಸ್ಟಡಿ ಮುಗಿಯುತ್ತಿದ್ದಂತೆ ನ್ಯಾಯಾಂಗ ಬಂಧನಕ್ಕೆ ಕೊಟ್ಟರೆ ಬಾಡಿ ವಾರಂಟ್ ಮೇಲೆ ಕೇರಳಕ್ಕೆ ಕರೆದೊಯ್ಯಲು ಕೇರಳ ಪೊಲೀಸರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Ravi Pujari Kerala Police CCB Police Mumbai Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ